ವಾಲಿ ಫೌಂಡೇಷನ್ನಿಂದ 10 ಸಾವಿರ ಮಾಸ್ಕ್ ವಿತರಣೆ

Wali
Published on

ಬೀದರ್: ವಿವೇಕ ದೀಪಕ್ ವಾಲಿ ಫೌಂಡೇಷನ್ನಿಂದ ಉದ್ಯಮಿ ದೀಪಕ್ ವಾಲಿ ಅವರ 51ನೇ ಜನ್ಮದಿನ ನಿಮಿತ್ತ ಗುರುವಾರ 10 ಸಾವಿರ ಮರು ಬಳಕೆಯ ಉತ್ತಮ ಗುಣಮಟ್ಟದ ಮಾಸ್ಕ್ ವಿತರಣೆ ಮಾಡಲಾಗಿದೆ. ಈ ಮೂಲಕ ಜನ್ಮ ದಿನವನ್ನು ಸಾಮಾಜಿಕ ಸೇವೆಗೆ ಸಮರ್ಪಿಸಲಾಯಿತು.
ದೀಪಕ್ ವಾಲಿ ಅವರ ಪುತ್ರ, ಯುವ ಉದ್ಯಮಿ ವಿವೇಕ ಅಧ್ಯಕ್ಷತೆಯ ಫೌಂಡೇಷನ್ ಎರಡೂವರೆ ತಿಂಗಳಿಂದ ಕರೊನಾ ಸಂಕಷ್ಟದಲ್ಲಿದ್ದವರಿಗೆ ನೆರವು, ಮಾಸ್ಕ್ ವಿತರಣೆ, ಜನಜಾಗೃತಿ ಇತರ ಸಮಾಜಮುಖಿ ಚಟುವಟಿಕೆ ನಡೆಸುತ್ತಿದೆ. ಕರೊನಾ ಹಿನ್ನೆಲೆಯಲ್ಲಿ ಜನ್ಮ ದಿನ ಆಚರಣೆ ಬದಲಾಗಿ ಮಾಸ್ಕ್ ವಿತರಣೆ ನಡೆಸಲಾಯಿತು. ವಿವೇಕ ನೇತೃತ್ವದ ತಂಡ ಪೊಲೀಸ್, ಶಿಕ್ಷಣ, ಕಂದಾಯ, ಅಂಚೆ, ವಾರ್ತಾ ಸೇರಿ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಗೂ ಇತರರಿಗೆ ಕೆ-95 ಮಾಸ್ಕ್ ಹೊಂದಿದ 5100 ಬಾಕ್ಸ್ ಹಂಚಲಾಗಿದೆ. ಪ್ರತಿ ಬಾಕ್ಸ್ನಲ್ಲಿ ಎರಡು ಮಾಸ್ಕ್, ಕರೊನಾ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಕರಪತ್ರ, ಸ್ಯಾನಿಟೈಸರ್ ಸಮೇತ 1000 ಪೆನ್ ನೀಡಿರುವುದು ವಿಶೇಷ.
ಜನ್ಮದಿನದ ಶುಭಾಶಯ ಕೋರಲು ಬಂದವರಿಗೂ ಮಾಸ್ಕ್ ನೀಡಲಾಯಿತು. ಈ ವೇಳೆ ಮಾತನಾಡಿದ ಫೌಂಡೇಷನ್ ಅಧ್ಯಕ್ಷ ವಿವೇಕ ವಾಲಿ, ಏಪ್ರಿಲ್ 1ರಿಂದ ಈವರೆಗೆ 30 ಸಾವಿರ ಮಾಸ್ಕ್ ವಿತರಿಸಲಾಗಿದೆ. 4 ಸಾವಿರ ಬಡವರಿಗೆ, ಕಾರ್ಮಿಕರಿಗೆ ಫುಡ್ ಕಿಟ್ ಹಂಚಲಾಗಿದೆ. ಫೌಂಡೇಷನ್ನಿಂದ ನಿರಂತರ ಸಾಮಾಜಿಕ ಚಟುವಟಿಕೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net