ವಾರ್ಷಿಕ ಪ್ರಶಸ್ತಿಗಳಿಗೆ ಪತ್ರಕರ್ತರ ಆಯ್ಕೆ

Published on

ಚಾಮರಾಜನಗರ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಿಕಾ ದಿನಾಚರಣೆ ಅಂಗವಾಗಿ ನೀಡುವ ಜಿಲ್ಲಾ ವಾರ್ಷಿಕ ಪ್ರಶಸ್ತಿಗಳಿಗೆ 5 ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ.

ಚಾಮರಾಜನಗರ ತಾಲೂಕಿನಿಂದ ಪತ್ರಕರ್ತ ವಿ.ಗಂಗಾಧರ್, ಗುಂಡ್ಲುಪೇಟೆ ವರದಿಗಾರ ಮಹೇಶ್ ಮಡಹಳ್ಳಿ, ಯಳಂದೂರು ವರದಿಗಾರ ಇರ್ಫಾನ್, ಕೊಳ್ಳೇಗಾಲ ವರದಿಗಾರ ಎಂ.ಮರಿಸ್ವಾಮಿ ಹಾಗೂ ಹನೂರು ವರದಿಗಾರ ಸುರೇಶ್ ಅಜ್ಜೀಪುರ ಅವರನ್ನು ಆಯ್ಕೆ ಮಾಡಲಾಗಿದೆ.

ತಾಲೂಕಿನಿಂದ ತಲಾ ಒಬ್ಬರಂತೆ ಐವರನ್ನು ಸೇವಾ ಹಿರಿತನದ ಆಧಾರದ ಮೇಲೆ ಆಯ್ಕೆ ಮಾಡಲಾಗಿದ್ದು, ಜು.20 ರಂದು ನಗರದ ವರ್ತಕರ ಭವನದಲ್ಲಿ ಆಯೋಜಿಸಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಸಾದ್‌ಲಕ್ಕೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net