

ಧಾರವಾಡ: ನಗರದ ಉತ್ತರ ಕರ್ನಾಟಕ ಲೇಖಕಿಯರ ಸಂಘವು ನೀಡುವ ಕಾವ್ಯ ಪ್ರಶಸ್ತಿ, ಕಥಾ ಪ್ರಶಸ್ತಿ ಹಾಗೂ ಸಾಹಿತ್ಯ ಸರಸ್ವತಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. 2021 ಹಾಗೂ 2022ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ 6 ಜನ ಸಾಹಿತಿಗಳನ್ನು ಆಯ್ಕೆ ಮಾಡಲಾಗಿದೆ.
ಸಾಹಿತ್ಯ ಸರಸ್ವತಿ ಪ್ರಶಸ್ತಿಗೆ ಡಾ. ಜಯಾ ರಾಜಶೇಖರ (2021ನೇ ಸಾಲಿನ), ಶಾಂತಲಾ ಯಡ್ರಾವಿ, ಶ್ರೀಮತಿ ಶಾಂತಾದೇವಿ ಕಣವಿ ಕಥಾ ಪ್ರಶಸ್ತಿಗೆ ಬಾನು ಮುಷ್ತಾಕ್ (2021), ಮಧುರಾ ಕರ್ಣಮ್ (2022) ಹಾಗೂ ಡಾ. ಲತಾ ರಾಜಶೇಖರ ಕಾವ್ಯ ಪ್ರಶಸ್ತಿಗೆ ಸವಿತಾ ನಾಗಭೂಷಣ (2021) ಹಾಗೂ ಡಾ. ವಿನಯಾ ಒಕ್ಕುಂದ (2022) ಆಯ್ಕೆಯಾಗಿದ್ದಾರೆ.
ಕಾವ್ಯ ಪ್ರಶಸ್ತಿ ಹಾಗೂ ಕಥಾ ಪ್ರಶಸ್ತಿಗಳು ತಲಾ 10,000 ರೂ., ಸಾಹಿತ್ಯ ಸರಸ್ವತಿ ಪ್ರಶಸ್ತಿಯು 5,000 ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿದೆ. ಆಗಸ್ಟ್ ಕೊನೆ ವಾರದಲ್ಲಿ ನಡೆಯುವ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷೆ ಡಾ. ರಾಜೇಶ್ವರಿ ಮಹೇಶ್ವರಯ್ಯ ತಿಳಿಸಿದ್ದಾರೆ.