ವಾರ್ತಾ ಇಲಾಖೆಗೆ ವಾಹನ ಹಸ್ತಾಂತರ

ctd....drive
Published on

ಚಿತ್ರದುರ್ಗ: ನಗರದ ಶ್ರೀ ಮುರುಘ ರಾಜೇಂದ್ರ ಕ್ರೀಡಾಂಗಣದಲ್ಲಿ ಪತ್ರಕರ್ತರ ಹೊಸ ವಾಹನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಚಾಲನೆ ನೀಡಿದರು. ಶಾಸಕರ ವಿಶೇಷ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ ಅಂದಾಜು 27 ಲಕ್ಷ ರೂ.ವೆಚ್ಚದ ವಾಹನವನ್ನು ಪತ್ರಕರ್ತರಿಗಾಗಿ ವಾರ್ತಾ ಇಲಾಖೆಗೆ ಸಚಿವರು ಹಸ್ತಾಂತರಿಸಿದರು.

ಈ ವೇಳೆ ಕ್ರೀಡಾಂಗಣದಿಂದ ಜಿಪಂವರೆಗೆ ಸಚಿವರು ವಾಹನ ಚಲಾಯಿಸಿದರು. ಪತ್ರಕರ್ತರು, ಗಣ್ಯರು ವಾಹನದಲ್ಲಿ ಜಿಪಂಗೆ ಇದೇ ವಾಹನದಲ್ಲಿ ತೆರಳಿದರು. ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ರಾಜ್ಯಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತಾ ರಾಘವೇಂದ್ರ, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಎಡಿಸಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ, ಪ್ರಧಾನ ಕಾರ‌್ಯದರ್ಶಿ ಸಿದ್ದರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net