

ಚಿತ್ರದುರ್ಗ: ಜಿಲ್ಲೆಯ ಹಲವೆಡೆ ವಿವಿಧ ಕಂಪನಿಗಳ ಅಂದಾಜು 5 ಲಕ್ಷ ರೂ. ಮೌಲ್ಯದ 50 ಮೊಬೈಲ್‌ಗಳು ಕಳೆದು ಹೋಗಿದ್ದು, ವಾರಸುದಾರರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಅವರು ಮಂಗಳವಾರ ಹಸ್ತಾಂತರಿಸಿದರು.
ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎನ್.ವೆಂಕಟೇಶ್, ಎಎಸ್‌ಐ ಮಲ್ಲಿಕಾರ್ಜುನಯ್ಯ, ಕಾನ್ಸ್‌ಟೇಬಲ್‌ಗಳಾದ ಭೀಮನಗೌಡ ಪಾಟೀಲ್, ಗಗನ್ ದೀಪ್ ಪವಾರ್, ಶಾಂತಲಾ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ, ಡಿಸಿಆರ್‌ಬಿ ವಿಭಾಗದ ಪೊಲೀಸ್ ಉಪಾಧೀಕ್ಷಕ ಎನ್.ಲೋಕೇಶ್ವರಪ್ಪ ಇದ್ದರು.