ವಾರಕ್ಕೊಮ್ಮೆ ಮೇಲೂರಿನಲ್ಲಿ ಆರೋಗ್ಯ ಕಾರ್ಡ್ ಸೇವೆ

11.07.2020 SDLP 01
Published on

ಶಿಡ್ಲಘಟ್ಟ:  ಬಡವರಿಗೆ ಆರೋಗ್ಯ ಭದ್ರತೆ ಒದಗಿಸುವ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಕಾರ್ಡ್ ಪ್ರತಿ ಶನಿವಾರ ಮೇಲೂರಿನಲ್ಲಿಯೇ ಮಾಡಿಸಿಕೊಡಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಆರ್.ಎ.ಉಮೇಶ್ ತಿಳಿಸಿದರು.

ಎಚ್.ಡಿ.ದೇವೇಗೌಡ ಮತ್ತು ಶ್ರೀ ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ಧಿ ಚಾರಿಟಬಲ್ ಟ್ರಸ್ಟ್‌ನಿಂದ ಮೇಲೂರಿನ ಗೌಡ ಕಮ್ಯುನಿಕೇಷನ್ಸ್ ನಲ್ಲಿ ಸೇವಾಕೇಂದ್ರಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ವರ್ಷಕ್ಕೆ 5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ನೀಡುವ ಈ ಯೋಜನೆಯ ಕಾರ್ಡ್‌ಗಳ ವಿತರಣೆ ಗ್ರಾಮೀಣ ಭಾಗದಲ್ಲಿ ಸಮಪರ್ಕವಾಗಿ ಆಗಿಲ್ಲ, ಕಾರ್ಡ್ ಮಾಡಿಸಲು ಜಂಗಮಕೋಟೆಗೆ ಹೋಗಬೇಕಿತ್ತು, ಆದರೆ ಕರೊನಾ ಹಿನ್ನೆಲೆಯಲ್ಲಿ ಇದಕ್ಕೂ ತೊಂದರೆಯಾದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸೇವಾಕೇಂದ್ರ ತೆರೆಯಲಾಗಿದೆ ಎಂದು ತಿಳಿಸಿದರು.

ಜಂಗಮಕೋಟೆಯಲ್ಲಿ ನಮ್ಮ ಕೇಂದ್ರವಿದೆ. ಆದರೆ ಅಲ್ಲಿ ಕರೊನಾ ಪ್ರಕರಣಗಳು ದೃಢ ಪಡುತ್ತಿರುವ ಕಾರ್ಡ್ ಮಾಡಿಸಿಕೊಳ್ಳಲು ಕಷ್ಟವಾಗುತ್ತಿದೆ, ಈ ಹಿನ್ನೆಲೆಯಲ್ಲಿ ಮೇಲೂರಿನಲ್ಲಿ ಕೇಂದ್ರ ಆರಂಭಿಸಲಾಗಿದೆ ಎಂದು ಡಿಜಿಟಲ್ ಸೇವಾ ಕೇಂದ್ರ ಜೆ.ಕೆ.ರವಿಕುಮಾರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net