ವಾಯುವಿಹಾರಿಗಳ ಬಳಿ ಚಂದ್ರಪ್ಪ ಮತಯಾಚನೆ

Chandrappa
Published on

ಚಿತ್ರದುರ್ಗ: ನಗರದ ವೀರವನಿತೆ ಒನಕೆ ಓಬವ್ವ ಹೊರಾಂಗಣ ಕ್ರೀಡಾಂಗಣದಲ್ಲಿ ಇಲ್ಲಿನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪ ಅವರು ಭಾನುವಾರ ವಾಕಿಂಗ್‌ ಮಾಡಲು ಮುಂದಾದರು. ಇದೇ ವೇಳೆ ವಾಯುವಿಹಾರಿಗಳ ಬಳಿ ಮತಯಾಚಿಸಿದರು.

ಹೊರಭಾಗದಲ್ಲಿನ ಟೀ ಸ್ಟಾಲ್‌, ತರಕಾರಿ, ಹೂವು, ಹಣ್ಣಿನ ವ್ಯಾಪಾರಿಗಳ ಬಳಿಗೂ ಹೋಗಿ ತಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್‌ಗೆ ನೀಡುವಂತೆ ಕೋರಿದರು.

ನಂತರ ಮಾತನಾಡಿದ ಅವರು, ಈ ಹಿಂದೆ ನನಗೆ ಒಮ್ಮೆ ಆಶೀರ್ವದಿಸಿ, ಸಂಸದನಾಗಿ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದೀರಿ. ಅಗತ್ಯ ಸಹಕಾರ ನೀಡುವ ಮೂಲಕ ಕ್ಷೇತ್ರದಲ್ಲಿನ ಸಮಸ್ಯೆ ಬಗೆಹರಿಸಲು, ಅಭಿವೃದ್ಧಿಗಾಗಿ ಮತ್ತೊಮ್ಮೆ ಕೈ ಸರ್ಕಾರ ಬಲಪಡಿಸಲು ಮತಾಶೀರ್ವಾದ ಮಾಡಿ ಎಂದು ಮನವಿ ಮಾಡಿದರು. ಮುಖಂಡರಾದ ಶಿವುಯಾದವ್‌, ರಾಘವೇಂದ್ರ, ಎಮ್ಮೆಹಟ್ಟಿ ಹನುಮಂತಪ್ಪ, ತಿಮ್ಮಣ್ಣ, ಮೈಲಾರಪ್ಪ, ಜಡೇಕುಂಟೆ ಮಂಜುನಾಥ್‌, ಜಯಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net