ವಾಯು ಸೇನೆಯಲ್ಲಿ ವಿಫುಲ ಉದ್ಯೋಗಾವಕಾಶಗಳಿವೆ- ಸ್ಕ್ವಾಡ್ರನ್ ಲೀಡರ್ ಜಿ. ದೀಪಿಕಾ

MAHAVEER HARDI
Published on

ಬೆಳಗಾವಿ: ಭಾರತೀಯ ವಾಯುಸೇನೆಯಲ್ಲಿ ತಾಂತ್ರಿಕ ಶಿಕ್ಷಣ ಪಡೆದವರಿಗೆ ಅಷ್ಟೇ ಅಲ್ಲದೆ ಬೇರೆ ವಿವಿಧ ಕೋಸ್‌ರ್ಗಳನ್ನು ಪಡೆದವರಿಗೂ ವಿಫುಲ ಉದ್ಯೋಗ ಅವಕಾಶಗಳಿವೆ ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಾಂಬ್ರಾ ಏರಮನ್ ತರಬೇತಿ ಕೇಂದ್ರದ ಭಾರತೀಯ ವಾಯು ಸೇನಾಪಡೆಯ ಸ್ಕ್ವಾಡ್ರನ್ ಲೀಡರ ಜಿ. ದೀಪಿಕಾ ಹೇಳಿದರು.
ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಮಹಾವೀರ ಪಿ. ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ‘ಭಾರತೀಯ ವಾಯುಸೇನೆಯಲ್ಲಿ ಉದ್ಯೋಗಾವಕಾಶಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಭಾರತೀಯ ವಾಯುಸೇನೆ ತನ್ನದೇ ಆದ ಇತಿಹಾಸವನ್ನು ಹೊಂದಿದೆ ಅಲ್ಲದೆ ಯಾವುದೆ ಕಷ್ಟಕಾಲದಲ್ಲೂ ಸದಾ ಸನ್ನದ್ದವಾಗಿರುತ್ತದೆ. ಅಂತಹ ಒಂದು ಸೇನೆಯಲ್ಲಿ ಉದ್ಯೊಗ ಮಾಡುವುದು ನಿಮಗೆಲ್ಲ ಹೆಮ್ಮೆಯ ವಿಷಯವಾಗಿರುತ್ತದೆ. ವಾಯು ಸೇನೆಯಲ್ಲಿರುವ ಅವಕಾಶಗಳನ್ನು ಬಳಸಿಕೊಂಡು, ಸರ್ವರೂ, ರಾಷ್ಟ್ರಸೇವೆಯಲ್ಲಿ ತೊಡಗಬೇಕು ಎಂದು ಏರಮನ್ ತರಬೇತಿ ಕೇಂದ್ರ ಸಾಂಬ್ರಾ ಇದರ ಶೈಕ್ಷಣಿಕ ಅಧಿಕಾರಿ ಸ್ಕ್ವಾಡ್ರನ್ ಲೀಡರ ಜಿ. ದಿಪೀಕಾ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಕಾರ್ಯಕಾರಿ ಮಂಡಳಿಯ ಸದಸ್ಯ ಮಹಾವೀರ ಹರ್ದಿ ಅವರು ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯಕಾರಿಯಾಗಲಿವೆ ಎಂದರು. ಸಂಸ್ಥೆಯ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನವನ್ನು ಈ ಸಂದರ್ಭದಲ್ಲಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ದೈಹಿಕ ನಿರ್ದೇಶಕ ಗಿರಿಶ ಮೋರೆ, ವಾರೆಂಟ್ ಆಫಿಸರ್ ಅಶ್ವಿನಿಕುಮಾರ, ಕಾಲೆಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಕಾಲೇಜಿನ ಪ್ರಾಚಾರ್ಯ ನಿರ್ಮಲಾ ಗಡಾದ ಸ್ವಾಗಸಿದರು. ನಾಗವೇಣಿ ಧರೆಣ್ಣವರ ಅವರು ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಗ್ರಂಥಪಾಲಕ ಡಾ.ಭರತ ಅಲಸಂದಿ ಅವರು ಅತಿಥಿಗಳನ್ನು ಪರಿಚಯಿಸಿದರು. ಐಕ್ಯೂಎಸಿ ಸಂಯೋಜಕ ರವಿ ದಂಡಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net