ವಾಯು ವಿಹಾರಿ ಮಹಿಳೆಯ ಚಿನ್ನದ ಸರ ಅಪಹರಣ

Gold Chain
Published on

ಮೈಸೂರು: ಮಂಡಿ ಮೊಹಲ್ಲಾದಲ್ಲಿ ವಾಯು ವಿಹಾರ ಮಾಡುತ್ತಿದ್ದ ಮಹಿಳೆಯ ಚಿನ್ನದ ಸರವನ್ನು ಸರಗಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಇಲ್ಲಿಯ ನಿವಾಸಿ ಬದ್ರಿನಾರಾಯಣ ಅವರ ಪತ್ನಿ ಎಸ್. ಲಲಿತಾ (35) ಸರ ಕಳೆದುಕೊಂಡವರು.

ರತನ್‌ಸಿಂಗ್ ಗಲ್ಲಿಯಲ್ಲಿ ಅವರು ವಾಯುವಿಹಾರ ಮಾಡುತ್ತಿದ್ದರು. ಆಗ ಎದುರಿನಿಂದ ಬೈಕ್‌ನಲ್ಲಿ ಯುವಕರಿಬ್ಬರು ಅವರ ಕೊರಳಿನಲ್ಲಿದ್ದ 35 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದಾರೆ.

ಈ ಕುರಿತು ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net