ಹುಲಿಯೂರುದುರ್ಗ: ಆರ್.ಬ್ಯಾಡರಹಳ್ಳಿಯ ಚಂದ್ರಮ್ಮ ಎಂಬುವವರ ಮನೆಯಲ್ಲಿ ಗ್ರಾಮದ ವ್ಯಕ್ತಿಯೇ ವಾಮಾಚಾರ ಮಾಡಿರುವುದು ಮನೆಯ ಸಿಸಿ ಕ್ಯಾಮಾರದಲ್ಲಿ ತಿಳಿದು ಬಂದಿದೆ. ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಆರ್.ಬ್ಯಾಡರಹಳ್ಳಿಯ ಚಂದ್ರಮ್ಮ ಎಂಬುವವರ ಮನೆಯಲ್ಲಿ ಒಂದು ತಿಂಗಳ ಹಿಂದೆ ಕಳ್ಳತನವಾಗಿತ್ತು. ಕಳ್ಳರು 25 ಗ್ರಾಂ ಚಿನ್ನಾಭರಣ ಹಾಗೂ 1 ಲಕ್ಷ ನಗದು ದೊಚಿದರು. ಕಳ್ಳತನದ ಬಳಿಕ ಮನೆಯ ಸುರಕ್ಷತೆಯ ದೃಷ್ಟಿಯಿಂದ ಮನೆಗೆ ಸಿ.ಸಿ ಕ್ಯಾಮರ್ ಅಳವಡಿಸಲಾಗಿತ್ತು. ಆದರೆ ಇದೆ ಗ್ರಾಮದ ಮೋಟೆಗೌಡ ಎಂಬಾತ ಚಂದ್ರಮ್ಮನ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಬಳಿ ಬಂದು ಕೋಳಿಮೊಟ್ಟೆ, ನಿಂಬೆಹಣ್ಣು, ಅರಿಶಿಣ, ಕುಂಕುಮ ಹಾಗೂ ಕೋಳಿ ಕತ್ತರಿಸಿರುವ ರಕ್ತ ಮತ್ತು ಬಟ್ಟೆ ಎಸೆದು ವಾಮಾಚಾರ ಮಾಡಿ ಹೋಗಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಮನೆಯವರ ಆತಂಕಕ್ಕೆ ಕಾರಣವಾಗಿದೆ. ಆರೋಪಿ ಬ್ಯಾಡರಹಳ್ಳಿ ಮೊಟೆಗೌಡನ ವಿರುದ್ಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.