

ಬಾಗಲಕೋಟೆ: ಹಿರಿಯರ ಮಾರ್ಗದರ್ಶನ, ಅಭಿಪ್ರಾಯ ತೆಗೆದುಕೊಳ್ಳುವುದರಲ್ಲಿ ಕೆಲವೊಂದಿಷ್ಟು ಕಡೆಗೆ ಎಡವಿರಬಹುದು. ಮುಖಂಡರ ಬಗ್ಗೆ ಮಾತುಗಳು, ವಾದ-ವಿವಾದಕ್ಕೆ ಆಸ್ಪದ ಕೊಡದೇ ಈಗ ಉಂಟಾಗಿರುವ ಅಸಮಧಾನವನ್ನು ಮುಂದುವರೆಸದೇ ನಾಲ್ಕು ಗೋಡೆಗಳ ಮಧ್ಯ ದೊಡ್ಡವರ ಜೊತೆ ಕುಳಿತು ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಕಿವಿಮಾತು ಹೇಳಿದರು.
ಬಿಎಸ್‌ವೈ ವಿರುದ್ಧ ಕೆಲವರು ಬಹಿರಂಗ ಹೇಳಿಕೆ ನೀಡಿ, ಅಪಮಾನಿಸಿದರೂ ಅವರಿಂದ ಬೆಳೆದು ಅಽಕಾರ ಅನುಭವಿಸಿದ ಹಿರಿಯರು ಮೌನವಾಗಿರುವ ಬಗ್ಗೆ ವಿಜಯೇಂದ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ ಎನ್ನುವ ಪ್ರಶ್ನೆಗೆ ಶುಕ್ರವಾರ ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮುರುಗೇಶ್ ನಿರಾಣಿ ಈ ರೀತಿ ಪ್ರತಿಕ್ರಿಯಿಸಿದರು.
ನನಗೆ ಬೀಳಗಿ ಕ್ಷೇತ್ರದ ಜನರು ಆಶೀರ್ವಾದ ಮಾಡಿ ಆರಿಸಿಯೂ ಕಳಿಹಿಸಿದ್ದಾರೆ, ಮನೆಯಲ್ಲೂ ಕೂಡಿಸಿದ್ದಾರೆ. ಅದೇ ತೆರನಾಗಿ ನನ್ನ ಮಗ ಬಂದಿದ್ದಾನೆ ಎಂದರೆ ಮಗನ ಕೊಡುಗೆ ಏನು ಎನ್ನುವುದು ಆಗಬೇಕು. ಸದ್ಯ ವಿಜಯೇಂದ್ರ ಯುವಕನಾಗಿದ್ದಾನೆ. ರಾಜ್ಯಾಧ್ಯಕ್ಷನಾಗಿ ಚನ್ನಾಗಿ ಕೆಲಸವನ್ನು ಮಾಡಿದ್ದಾನೆ. ಅವನೂ ಒಬ್ಬ ಕಾನೂನು ಪದವಿಧರನೂ ಇದ್ದಾನೆ. ೫೦ ವರ್ಷದ ಯಡಿಯೂರಪ್ಪ ಅವರ ಹೋರಾಟ, ಸಂಘಟನೆಯ ಅನುಭವ ಪಡೆದುಕೊಂಡಿದ್ದಾನೆ. ಆದರೂ ಇನ್ನೂ ಹೆಚ್ಚಿನ ಶಕ್ತಿ ಹಾಕಿ, ಅಸಮಧಾನಿತರನ್ನು ಮನವೊಲಸುವ ಕಡೆಗೆ ಗಮನ ಕೊಡಬೇಕು. ತಟಸ್ಥ ಗ್ರುಪಿನವರ ಜೊತೆಗೆ ಒನ್ ಟು ಒನ್ ಮಾತನಾಡಬೇಕು. ತಂದೆಯವರ ಸಹಾಯ ತೆಗೆದುಕೊಂಡಿದ್ದಾರೆ ಎಂದರೆ ಅದಕ್ಕೆ ಅವರು ಮತ್ತೊಂದು ಮಾತನಾಡುತ್ತಾರೆ. ಹೀಗೆ ಮಾತು, ವಾದ-ವಿವಾದ ಮಾಡದೇ ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇವತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅತ್ಯಂತ ಭ್ರಷ್ಟವಾಗಿದೆ. ಸಾಕಷ್ಟು ನ್ಯೂನತೆಗಳು ಇವೆ. ಅವರ ಭ್ರಷ್ಟಾಚಾರ, ದುರಾಡಳಿತ, ಅಭಿವೃದ್ಧಿ ಕೆಲಸಗಳ ಕುಂಟಿತದ ಬಗ್ಗೆ ನಾವು ಒಗ್ಗೂಡಿ ಕೆಲಸ ಮಾಡಬೇಕೆ ವಿನಃ ನಾವು ಬಡದಾಡಿಕೊಂಡದರೆ ಈ ಕಾಂಗ್ರೆಸ್‌ನವರನ್ನು ಕೇಳುವವರು ಯಾರು ಇಲ್ಲದಂತಾಗುತ್ತದೆ. ಅದಕ್ಕಾಗಿ ಅಸಮಧಾನ ಬದಿಗಿಟ್ಟು ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.
ಇನ್ನು ರಾಜ್ಯಾಧ್ಯಕ್ಷರ ಬದಲಾವಣೆ ಬರೀ ರಾಜ್ಯಕ್ಕೆ ಸೀಮಿತವಲ್ಲ. ನಮ್ಮಲ್ಲಿ ಮೂರು ವರ್ಷಕ್ಕೆ ಮಂಡಲದಿAದ ರಾಷ್ಟಿçÃಯ ಅಧ್ಯಕ್ಷರ ಬದಲಾವಣೆ ಆಗುತ್ತದೆ. ಸದ್ಯ ಮೊದಲ ಅವಽಯಲ್ಲಿ ಇರುವ ವಿಜಯೇಂದ್ರ ಇನ್ನೊಂದು ಅವಽಗೆ ಮುಂದುವರೆಸುವAತೆ ಕೋರಿದ್ದಾರೆ. ಅದಕ್ಕೆ ಬಹಿರಂಗವಾಗಿ ವಿರೋಽಸುವ ಒಂದು ಬಣ ಇದೆ. ಮತ್ತೊಂದು ತಟಸ್ಥವಾಗಿದೆ. ಅಂತಿಮವಾಗಿ ಹೈಕಮಾಂಡ್ ಎರಡು ಬಣಗಳಿಗೂ ಸಮಧಾನವಾಗುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವ ವಿಶ್ವಾಸ ಇದ್ದು, -ೆ. ೧೦ ರ ಬಳಿಕ ನಿರ್ಧಾರ ಪ್ರಕಟವಾಗುವ ವಿಶ್ವಾಸ ಇದೆ ಎಂದರು.
ಇನ್ನು ತಾವು ವಿಜಯೇಂದ್ರ ಪರವೋ, ವಿರುದ್ದವೋ, ತಟಸ್ಥ ಬಣವೋ ಎನ್ನುವ ಪ್ರಶ್ನೆಗೂ ತಾವು ಯಾವ ಬಣವೂ ಅಲ್ಲ. ನನ್ನದು ಬಿಜೆಪಿ ಬಣ ಅಷ್ಟೆ. ತಟಸ್ಥ ಬಣ ಎನ್ನುವುದು ಮಾಧ್ಯಮಗಳಲ್ಲಿ ಬಂದಿದ್ದು. ಈಗ ನನ್ನನ್ನು ನಾಲ್ಕನೇ ಬಣ ಎಂದು ಬಿಂಬಿಸಿದರೆ ಏನೂ ಮಾಡಲು ಆಗುತ್ತದೆ? ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದು ತಿಳಿಸಿದರು.
ಇನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ನೂರಕ್ಕೆ ನೂರು ಆಕಾಂಕ್ಷಿ ಅಲ್ಲ. ನಾನು ಏನನ್ನೂ ಕೇಳಿಲ್ಲ. ಈಗಲೂ ಸಹ ಪಕ್ಷ ಯಾವ ಜವಾಬ್ದಾರಿ ಕೊಟ್ಟರೂ ಅದನ್ನು ನಿರ್ವಹಿಸುತ್ತೇನೆ ಎಂದರು.