ವಾಣಿಜ್ಯ ಸಂಕೀರಣದಿ0ದ ವ್ಯಾಪಾರಕ್ಕೆ ಬೂಸ್ಟ್

bkt-15-2
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಬಾಗಲಕೋಟೆ ಯೂನಿಯನ್ ಆಫ್ ಮರ್ಚೆಂಟ್ಸ್ ಪ್ರಧಾನ ಕಾರ್ಯದರ್ಶಿ ವೀರುಪಾಕ್ಷ ಅಮೃತಕರ ಮಾತನಾಡಿದರು.
Published on

ಬಾಗಲಕೋಟೆ: ನವನಗರದ ಯೂನಿಟ್- ೩ ರಲ್ಲಿ ವ್ಯಾಪಾರಕ್ಕಾಗಿ ೨೦೦ ಎಕರೆ ಮೀಸಲಿಡಲು ಮುಂದಾಗಿರುವುದರಿAದ ಮುಳುಗಡೆ ನಗರಕ್ಕೆ ಆರ್ಥಿಕವಾಗಿ ಬೂಸ್ಟ್ ನೀಡಿದಂಗಾಗುತ್ತದೆ ಎಂದು ಬಾಗಲಕೋಟೆ ಯೂನಿಯನ್ ಆಫ್ ಮರ್ಚೆಂಟ್ಸ್ ಪ್ರಧಾನ ಕಾರ್ಯದರ್ಶಿ ವೀರುಪಾಕ್ಷ ಅಮೃತಕರ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಮುಳುಗಡೆಯಾದ ಬಳಿಕ ಇಲ್ಲಿನ ವ್ಯಾಪಾರ ಹಾಳಾಗಿದ್ದು, ಸರ್ಕಾರದ ಈ ನಿರ್ಧಾರದಿಂದ ಮತ್ತೆ ವ್ಯಾಪಾರದ ಗತ ವೈಭವ ಪುನರಾರಂಭವಾಗಲಿದೆ ಎಂದರು.

ಕಾಯಿಪಲ್ಲೆ ಹಾಗೂ ಅಡತ್ ಬಜಾರ್ ನಡುವೆ ಉತ್ತಮ ರೀತಿಯಲ್ಲಿ ನಡೆದಿದ್ದ ಚಿಲ್ಲರೆ ವ್ಯಾಪಾರ ಬಾಗಲಕೋಟೆ ಮುಳುಗಡೆಯಾದ ಬಳಿಕ ಕಾಯಿಪಲ್ಲೆ ಮಾರುಕಟ್ಟೆ ಹಾಗೂ ಅಡತ್ ಬಜಾರ್ ಬೇರೆಡೆ ಸ್ಥಳಾಂತರವಾದರೂ ಕಿರುಕುಳು ಮಾರುಕಟ್ಟೆ ಮೂರು ಕಡೆಗಳಲ್ಲಿ ಹರಿದು ಹಂಚಿದ ಪರಿಣಾಮ ವ್ಯಾಪಾರ ಹಾಳಾಯಿತು. ಮುಂದೆ ಬಂದ ಅನೇಕ ಸರ್ಕಾರಗಳಿಗೆ ವಾಣಿಜ್ಯ ಸಂಕಿರಣಕ್ಕಾಗಿ ಬೇಡಿಕೆ ಇಟ್ಟಿದ್ದು, ಈ ಸರ್ಕಾರ ಅದಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಎಂದರು.

ಅಸೋಸಿಯೇಷನ್ ಅಧ್ಯಕ್ಷ ರವಿ ಕುಮಟಗಿ ಮಾತನಾಡಿ, ವಿ.ಪ ಸದಸ್ಯ ಪಿ.ಎಚ್.ಪೂಜಾರ ಅವರು ಅಽವೇಶನದಲ್ಲಿ ಧ್ವನಿ ಎತ್ತಿದ್ದು, ಸರ್ಕಾರಕ್ಕೆ ಇದರ ಬಗ್ಗೆ ಅರಿವು ಮೂಡಿಸಿದ್ದ ಶಾಸಕ ಎಚ್.ವೈ.ಮೇಟಿ, ಈ ಬಗ್ಗೆ ಜನಪ್ರತಿನಿಽಗಳ ಮೇಲೆ ಒತ್ತಡ ಹೇರಿದ್ದ ಪ್ರಕಾಶ ತಪಶೆಟ್ಟಿ ಹಾಗೂ ಸರ್ಕಾರದ ಮೇಲೆ ಒತ್ತಡ ಹೇರಿದ್ದ ಮುಖಂಡ ಹೊಳಬಸು ಶೆಟ್ಟರ ಅವರ ಸತತ ಪ್ರಯತ್ನದಿಂದ ಸರ್ಕಾರ ಸ್ಪಂದಿಸಿದೆ ಎಂದು ತಿಳಿಸಿದರು.

ಅಸೋಸಿಯೇಷನ್‌ದ ಮುಖಂಡರಾದ ಪವನ ಸೀಮಿಕೇರಿ, ಶ್ರೀನಿವಾಸ ಬಳ್ಳಾರಿ, ಆನಂದ ಜಿಗಜಿಣಗಿ, ನಾಗರಾಜ ಕುಪ್ಪಸ್ತ, ರಾಮ ಮುಂದಡಾ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net