

ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 94ನೇ ಸಂಸ್ಥಾಪಕರ ದಿನಾಚರಣೆ ಹಾಗೂ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಸೆ. 24ರಂದು ಸಂಜೆ 5.30 ಗಂಟೆಗೆ ನಗರದ ಗೋಕುಲ ರಸ್ತೆಯ ಹೋಟೆಲ್ ಡೆನಿಸನ್ಸ್ನಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ ತಿಳಿಸಿದರು.
ಸಂಸ್ಥೆಯ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಾಪಾರ, ಉದ್ದಿಮೆ ಹಾಗೂ ಸಾರ್ವಜನಿಕ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ 7 ಜನ ಗಣ್ಯರಿಗೆ ವಾಣಿಜ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಬ್ಯಾಡಗಿಯ ಮೆ. ಬಿ.ಡಿ ಪಾಟೀಲ ಆಂಡ್ ಸನ್ಸ್ನ ಸುರೇಶ ಗೌಡ ಪಾಟೀಲ, ಮೆ. ರಂಗಪ್ಪಾ ಕಾಮತ ಗ್ರುಪ್ ಆಫ್ ಹೋಟೆಲ್ಸ್ನ ರಾಮಚಂದ್ರ ನಾಯಕ, ಹುಬ್ಬಳ್ಳಿಯ ಬಿಗ್ ಮಿಶ್ರಾದ ಸಂಜಯ ಮಿಶ್ರಾ, ಮೆ. ಸಾಯಿ ಆಗ್ರೋ ಇಕ್ವಿಪ್ವೆುಂಟ್ಸ್ನ ನಾರಾಯಣ ನಿರಂಜನ, ಕೊಪ್ಪಳದ ಮೆ. ವಿಜಯ ಫುಡ್ಸ್ನ ಶ್ರೀನಿವಾಸರಾವ್ ನೆಕ್ಕಂಟಿ, ಕುಲಬುರಗಿಯ ಮೆ. ವಿಜಯ ಮೂಡೀಸ್ ಟೀ ಹೌಸ್ನ ಅಮಿತ ಪರಮಾರ ಹಾಗೂ ಬಸವೇಶ್ವರ ಖಾನಾವಳಿಯ ಶೈಲಾ ಗಣಚಾರಿ ಅವರನ್ನು ವಾಣಿಜ್ಯ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಪ್ರವೀಣ ಅಗಡಿ, ಉಪಾಧ್ಯಕ್ಷರಾದ ಎಸ್.ಪಿ. ಸಂಶಿಮಠ, ಸಂದೀಪ ಬಿಡಸಾರಿಯಾ, ಜಂಟಿ ಕಾರ್ಯದರ್ಶಿ ಶಂಕರ ಕೋಳಿವಾಡ, ಶಶಿಧರ ಶೆಟ್ಟರ್. ಅಂಜನಾ ಬಸನಗೌಡರ್ ಇದ್ದರು.