ವಾಣಿಜ್ಯ ಮಳಿಗೆಗಳ ಅತಿಕ್ರಮಣ ತೆರವು

16arsph2ep
ಅರಸೀಕೆರೆ ಸಂತೆ ಮೈದಾನದ ಆವರಣದಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ಪೌರಾಯುಕ್ತ ಕೃಷ್ಣಮೂರ್ತಿ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಅತಿಕ್ರಮಣವನ್ನು ತೆರವುಗೊಳಿಸಿದರು.
Published on

ಅರಸೀಕೆರೆ: ನಗರದ ಸಂತೆ ಮೈದಾನದ ಆವರಣದಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ಪೌರಾಯುಕ್ತ ಕೃಷ್ಣಮೂರ್ತಿ ಬುಧವಾರ ಸಿಬ್ಬಂದಿಯೊಂದಿಗೆ ದಿಢೀರ್ ಭೇಟಿ ನೀಡಿ ಅತಿಕ್ರಮಣ ತೆರವುಗೊಳಿಸಿದರು.

ಈ ಸಂದರ್ಭದಲ್ಲಿ ಕೆಲ ವರ್ತಕರು ವಾಗ್ವಾದ ನಡೆಸಿ, ತೆರವಿಗೆ ನಿರಾಕರಿಸಿದರು. ಆದರೆ ಇದ್ಯಾವುದಕ್ಕೂ ಕ್ಯಾರೆ ಎನ್ನದ ನಗರಸಭೆ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಮಳಿಗೆಗಳಲ್ಲಿ ಅನಧಿಕೃತವಾಗಿ ದಾಸ್ತಾನು ಮಾಡಲಾಗಿದ್ದ ಆಲೂಗಡ್ಡೆ, ಈರುಳ್ಳಿ, ತರಕಾರಿ ಚೀಲ ಹಾಗೂ ಟೊಮ್ಯಾಟೋ ಬಾಕ್ಸ್‌ಗಳನ್ನು ಹೊರ ಹಾಕಿದರು. ಸಂಗ್ರವಾಗಿದ್ದ ತ್ಯಾಜ್ಯವನ್ನು ಕಸ ವಿಲೇವಾರಿ ಘಟಕಕ್ಕೆ ಸಾಗಿಸಲಾಯಿತು.
‘ಹರಾಜಿಗೂ ಮುನ್ನ ಅತಿಕ್ರಮಣ’ ಶೀರ್ಷಿಕೆಯಡಿ ವಿಜಯವಾಣಿ ಪತ್ರಿಕೆ ಬುಧವಾರ ವರದಿ ಪ್ರಕಟಿಸಿದ್ದು, ಇದರಿಂದ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಂಡಿದ್ದಾರೆ. ಆರೋಗ್ಯ ನಿರೀಕ್ಷಕ ರೇವಣ್ಣ, ಕಂದಾಯ ಅಧಿಕಾರಿ ರಾಜೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net