ವಾಣಿಜ್ಯ ಮಳಿಗೆ ನೆಲ ಸಮ

20 yerriswamy 04
Published on

ಬಳ್ಳಾರಿ : ಇಲ್ಲಿನ ಗಡಗಿ ಚೆನ್ನಪ್ಪ ವೃತ್ತದಲ್ಲಿನ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿನ ವಾಣಿಜ್ಯಮಳಿಗೆಯ ಕಟ್ಟಡವನ್ನು ಪಾಲಿಕೆಯು ಭಾನುವಾರ ತಡರಾತ್ರಿ ನೆಲಸಮಗೊಳಿಸಿದೆ.
ಗಡಗಿಚೆನ್ನಪ್ಪ ವೃತ್ತದಲ್ಲಿ ಬೃಹತ್‌ಕಾರದ ಗಡಿಯಾರ ಗೋಪುರ ನಿರ್ಮಾಣವಾಗುತ್ತಿದೆ. ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡುವ ಉದ್ದೇಶ ಹಾಗೂ ವೃತ್ತ ವಿಸ್ತರಣೆಗೆ ವಾಣಿಜ್ಯ ಮಳಿಗೆಯನ್ನು ಡೆಮಾಲಿಶ್ ಮಾಡಲಾಗಿದೆ. ಭಾನುವಾರ ತಡರಾತ್ರಿಯಿಂದ ಮೂರು ಜೆಸಿಬಿ ಹಾಗೂ ಒಂದು ಹಿಟೆಚ್ ಮೂಲಕ ಡೆಮಾಲಿಶ್ ಕಾರ್ಯ ಆರಂಭವಾಗಿ ಸೋಮವಾರ ಸಂಜೆಯವರೆಗ ನಡೆಯಿತು. ಈ ಡೆಮಾಲಿಶ್ ಕಾರ್ಯ ನಡೆಯುತ್ತಿರುವುದರಿಂದ ಈ ವೃತ್ತದ ಮೂಲಕ ವಾಹನ ಸವಾರರು ಸಂಚಾರಿಸಲು ಪರದಾಡಿದರು. ಇನ್ನೂ ಈ ಕಟ್ಟಡದಿಂದ ಮಹಾನಗರ ಪಾಲಿಕೆಯ ಕಚೇರಿಯ ಕಾಣದಂತೆ ಆಗಿತ್ತು. ಈ ವಾಣಿಜ್ಯ ಮಳಿಗೆಯ ಕಟ್ಟಡದಲ್ಲಿ ಬಟ್ಟೆ ಅಂಗಡಿ, ಹೋಟೆಲ್ ಸೇರಿದಂತೆ ಇತರೆ ಮಳಿಗೆಗಳು ಇದ್ದವು. ಈ ವಾಣಿಜ್ಯ ಮಳಿಗೆಯ ಕಟ್ಟಡವನ್ನು ನೆಲ ಸಮಗೊಳಿಸಲು ಫೆಬ್ರವರಿಯಲ್ಲಿ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಸದಸ್ಯರಿಂದ ಒಪ್ಪಿಗೆ ಪಡೆಯಲಾಗಿತ್ತು ಎಂದು ಪಾಲಿಕೆ ಆಯುಕ್ತ ಖಲೀಲ್ ಸಾಬ್ ಮೂಲಕ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net