ವಾಣಿಜ್ಯ ಮಳಿಗೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ

ವಾಣಿಜ್ಯ ಮಳಿಗೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
Published on

ಬೇಲೂರು: ಪಟ್ಟಣದ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಪುರಸಭೆಗೆ ಆಧಾಯ ಹೆಚ್ಚಿಸುವುದೇ ಪುರಸಭೆ ಅಧಿಕಾರಿಗಳ ಹಾಗೂ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪುರಸಭೆ ಅಧ್ಯಕ್ಷ ಸಿ.ಎನ್.ದಾನಿ ಹೇಳಿದರು.


ಪುರಸಭೆ ವ್ಯಾಪ್ತಿಯ 19ನೇ ವಾರ್ಡಿನ ಹಳೇ ಮಾರುಕಟ್ಟೆ ಆವರಣ ನೂತಕ ವಾಣಿಜ್ಯ ಮಳಿಗೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಹಳೆ ಮಾರುಕಟ್ಟೆಗೆ ಹೊಂದಿಕೊಂಡಂತೆ ಇರುವ 40*20 ಅಡಿ ಜಾಗದಲ್ಲಿ 28 ಲಕ್ಷ ರೂ, ಅಂದಾಜು ಮೊತ್ತದಲ್ಲಿ 8 ವಾಣಿಜ್ಯ ಮಳಿಗೆಗಳ ಸಂಕೀರ್ಣ ನಿರ್ಮಿಸಲಾಗುತ್ತಿದೆ, ಇದನ್ನು ಪುರಸಭೆಗೆ ಆಧಾಯ ತರುವ ಉದ್ದೇಶದಿಂದ ನಿರ್ಮಿಸಲಾಗುತ್ತಿದೆ, ಪುರಸಭೆಗೆ ಹೆಚ್ಚು ಆಧಾಯ ಬಂದರೆ ನೌಕರರಿಗೆ ಸಂಬಳ ಹಾಗೂ ಪಟ್ಟಣದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.


ಪುರಸಭೆ ಸದಸ್ಯರಾದ ಜಗದೀಶ್, ಶ್ರೀನಿವಾಸ್, ಜಮಾಲ್, ಪ್ರಭಾಕರ್, ಎಸ್.ರವಿ, ಮುಖ್ಯಾಧಿಕಾರಿ ಸುಜಯ್ ಕುಮಾರ್, ಆರೋಗ್ಯಧಿಕಾರಿ ಲೋಹಿತ್, ಇಂಜಿನಿಯರ್ ಜಗದೀಶ್, ಪುರಸಭೆ ಸಿಬ್ಬಂದಿ ಇದ್ದರು,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net