ವಾಡಿಕೆಗಿಂತ ಹತ್ತು ಪಟ್ಟು ಹೆಚ್ಚು ಸುರಿಯುತ್ತಿದೆ ಮಳೆ

24 ckm 6
ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯ ಕಾಫಿ ತೋಟಗಳಲ್ಲಿ ಈಗಾಗಲೇ ಹಣ್ಣಾಗಿರುವ ಕಾಫಿ.
Published on

ಚಿಕ್ಕಮಗಳೂರು: ಗಣೇಶ ಚತುರ್ಥಿ ಮುಗಿಯುತ್ತಿದ್ದಂತೆ ಮಳೆ ಕಡಿಮೆಯಾಗಲಾರಂಭಿಸಿ ದೀಪಾವಳಿ ಹಬ್ಬದ ವೇಳೆಗಾಗಲೆ ವರ್ಷಧಾರೆ ಸಂಪೂರ್ಣವಾಗಿ ಕಡಿಮೆಯಾಗಿರುತ್ತಿತ್ತು. ಒಂದು ವೇಳೆ ಈ ಅವಧಿಯಲ್ಲಿ ಮಳೆಬಂದರೂ ಸಾಧಾರಣವಾಗಿ ಸುರಿಯುತ್ತಿತ್ತು. ಆದರೆ ಈ ವರ್ಷ ಮಾತ್ರ ಹಿಂದೆAದೂ ಕಾಣದಂಥ ಮಹಾಮಳೆ ಕಾಫಿನಾಡಿನಲ್ಲಿ ಸುರಿಯಲಾರಂಭಿಸಿದೆ. ಇದರಿಂದಾಗಿ ಮಲೆನಾಡು ಸೇರಿದಂತೆ ಬಯಲು ಸೀಮೆಯ ಜನ ಹೈರಾಣಾಗಿ ಹೋಗಿದ್ದಾರೆ.

ದೀಪಾವಳಿ ಹಬ್ಬ ಮುಗಿದ ಕೆಲವೇ ದಿನಗಳಲ್ಲಿ ರೈತರು ತಾವು ಬೆಳೆದ ಬೆಳೆಗಳನ್ನು ಕಟಾವು ಮಾಡಲು ಆರಂಭಿಸುತ್ತಾರೆ. ಆದರೆ ಈ ಬಾರಿ ಅಕ್ಟೋಬರ್ ತಿಂಗಳು ಮುಗಿಯುತ್ತಾ ಬಂದರೂ ಮಳೆಗಾಲ ಮುಗಿಯುವಂತೆ ಕಾಣುತ್ತಿಲ್ಲ. ಒಂದೆರಡು ದಿನ ಮಳೆ ಬಿಡುವು ನೀಡಿದರೂ ಮತ್ತೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ರೈತರಿಗೆ ತಾವು ಬೆಳೆದ ಬೆಳೆಗಳನ್ನು ಕಟಾವು ಮಾಡುವುದು ಹೇಗೆ ಎಂದು ತಲೆಮೇಲೆ ಕೈಹೊತ್ತು ಕೂರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಮಲೆನಾಡು ಭಾಗದಲ್ಲಂತೂ ಏಪ್ರಿಲ್, ಮೇ ತಿಂಗಳಿನಿAದಲೇ ಮಳೆ ಆರಂಭಗೊAಡಿದೆ. ಆದರೆ ಬಯಲು ಸೀಮೆ ಭಾಗಗಳಾದ ಚಿಕ್ಕಮಗಳೂರು ತಾಲೂಕಿನ ಲಕ್ಯಾ ಭಾಗ, ತರೀಕೆರೆ ತಾಲೂಕಿನ ಅಜ್ಜಂಪುರ ಭಾಗ, ಕಡೂರು ಹಾಗೂ ಅಜ್ಜಂಪುರ ತಾಲೂಕುಗಳಲ್ಲಿ ಮುಂಗಾರ ಅವಧಿಯಲ್ಲಿ ವಾಡಿಕೆಯಷ್ಟು ಮಳೆಯಾಗಿರಲಿಲ್ಲ. ಹೀಗಾಗಿ ರೈತರು ಬೆಳೆ ಬೆಳೆಯಲು ಹನಿ ನೀರಿಗೂ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಕೆಲವರಂತೂ ಈರುಳ್ಳಿ ನಾಟಿ ಮಾಡಲು ಮಳೆಯಿಲ್ಲದೆ ಹದಿನೈದು ದಿನಗಳವರೆಗೆ ಕಾದ ಉದಾಹರಣೆಗಳೂ ಸಾಕಷ್ಟಿದ್ದವು. ಹೀಗೆ ಬರದಿಂದ ಹೇಗೋ ಉಳಿಸಿಕೊಂಡಿದ್ದ ಬೆಳೆಗಳು ಇದೀಗ ಸುರಿಯುತ್ತಿರುವ ಧಾರಾಕಾರ ಮಳೆ ಆಪೋಷನ ತೆಗೆದುಕೊಳ್ಳುತ್ತಿದೆ.

ಅಡಕೆ ಬೆಳೆಗಾರರ ಗೋಳು ಕೇಳುವವರಿಲ್ಲ

ಮಲೆನಾಡು ಭಾಗದ ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕುಗಳಲ್ಲಿ ಸಾಂಪ್ರದಾಯಿಕವಾಗಿ ಅಡಕೆ ಬೆಳೆಯಲಾಗುತ್ತಿದೆ. ಈ ಭಾಗದಲ್ಲಿನ ಹಳದಿ ಎಲೆ ರೋಗ, ಎಲೆಚುಕ್ಕೆ ರೋಗ, ಕೊಳೆರೋಗದಿಂದ ಅಳಿದುಳಿದ ಅಡಕೆ ಕೊಯ್ಲು ಮಾಡಲು ಮಳೆ ಬಿಡುವು ನೀಡುತ್ತಿಲ್ಲ. ಇದಲ್ಲದೆ ತರೀಕೆರೆ, ಬೀರೂರು ಭಾಗದಲ್ಲಿಯೂ ದೊಡ್ಡ ಮಟ್ಟದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಈ ಭಾಗದಲ್ಲಿ ಅಡಕೆಗೆ ಅಷ್ಟೇನೂ ರೋಗ ಬಾಧೆ ಇಲ್ಲದಿದ್ದರೂ ಇದೀಗ ಅಡಕೆ ಕೊಯ್ಲು ಮಾಡಲು ಮಳೆ ಬಿಡುವು ನೀಡುತ್ತಿಲ್ಲ.

ಅಡಕೆಗೆ ಪ್ರಸ್ತುತ ಉತ್ತಮ ಧಾರಣೆ ಇದೆ. ಆದರೆ ಈಗಾಗಲೇ ಅಡಕೆ ಮರದಲ್ಲಿಯೇ ಹಣ್ಣಾಗಲಾರಂಭಿಸಿದೆ. ಅಡಕೆ ಕೊಯ್ಲು ನಡೆಸಲು ಮಳೆ ಬಿಡುವು ನೀಡುತ್ತಿಲ್ಲ. ಮಲೆನಾಡಿನ ಜನ ಬಿಸಿಲಿನ ಮುಖವನ್ನೇ ನೋಡದೆ ಹಲವು ದಿನಗಳೇ ಕಳೆದಿವೆ. ಇಂಥ ವಾತಾವರಣದಲ್ಲಿ ಅಡಕೆ ಕೊಯ್ಲು ನಡೆಸಿದರೆ ಅಡಕೆ ಒಣಗಿಸಲು ಸಾಧ್ಯವೇ ಇಲ್ಲ. ಹೀಗಾಗಿ ಅಡಕೆ ಕೊಯ್ಲು ಮಾಡಿ ಅಡಕೆ ಒಣಗಿಸಲು ಸಾಧ್ಯವಾಗದೆ ಅಡಕೆ ಹಾಳು ಮಾಡಿಕೊಳ್ಳುವುದಕ್ಕಿಂತ ಅಡಕೆ ಹಣ್ಣಾದಲ್ಲಿ ಚಾಲಿಯನ್ನಾದರೂ ಮಾಡಿಕೊಳ್ಳಬಹುದು ಎಂಬ ಸ್ಥಿತಿಗೆ ಅಡಕೆ ಬೆಳೆಗಾರರು ಬಂದಿದ್ದಾರೆ.

ರಾಶಿ ಇಡಿ ಅಡಕೆಯ ಧಾರಣೆ ಪ್ರಸ್ತುತ ಕ್ವಿಂಟಾಲ್‌ಗೆ ೭೦ ಸಾವಿರ ರೂ. ಆಸುಪಾಸಿನಲ್ಲಿದೆ. ಹೀಗಾಗಿ ಮಳೆ ಬಿಡುವು ನೀಡಿz್ದೆÃ ಆಗಿದ್ದಲ್ಲಿ ಬೆಳೆಗಾರರು ಅಡಕೆ ಕೊಯ್ಲು ಮಾಡಿ ರಾಶಿ ಇಡಿ ಅಡಕೆಯನ್ನೇ ಉತ್ಪಾದನೆ ಮಾಡಿಕೊಂಡು ಇರುವ ಬೆಳೆಯಲ್ಲೇ ಉತ್ತರ ಧಾರಣೆ ಪಡೆಯುವ ನೀರಿಕ್ಷೆಯಲ್ಲಿದ್ದರು. ಆದರೆ ಬೆಳೆಗಾರರ ಈ ನಿರೀಕ್ಷೆಗೂ ಮಳೆ ತಣ್ಣೀರೆರಚಿದೆ.

ಕಾಫಿಗೂ ಸಂಕಷ್ಟ

ಸಾAಪ್ರದಾಯಿಕವಾಗಿ ಕಾಫಿನಾಡಿನಲ್ಲಿ ನವೆಂಬರ್ ಹಾಗೂ ಡಿಸೆಂಬರ್ ಅವಧಿಯಲ್ಲಿ ಕಾಫಿ ಹಣ್ಣಾಗಿ ಕೊಯ್ಲಿಗೆ ಬರುತ್ತಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಕೆಲ ವರ್ಷದಿಂದ ಅವಧಿಗೂ ಮುನ್ನವೇ ಕಾಫಿ ಕೊಯ್ಲಿಗೆ ಬರಲಾರಂಭಿಸಿದೆ. ಹಲವು ಕಾಫಿ ತೋಟಗಳಲಿ ಈಗಾಗಲೇ ಕಾಫಿ ಹಣ್ಣಾಗಲಾರಂಭಿಸಿದ್ದು, ಧೋ ಎಂದು ಸುರಿಯುತ್ತಿರುವ ಮಳೆಯ ಮಧ್ಯೆ ಕಾಫಿ ಕೊಯ್ಲು ನಡೆಸುವುದು ಹೇಗೆ ಎಂಬ ಪ್ರಶ್ನೆ ಕಾಫಿ ಬೆಳೆಗಾರರನ್ನು ಕಾಡಲಾರಂಭಿಸಿದೆ.

ಅದರಲ್ಲಿಯೂ ಚಂದ್ರದ್ರೋಣ ಪರ್ವತ ಶ್ರೇಣಿಯ ರೊಬೋಸ್ಟಾ ಕಾಫಿ ತೋಟಗಳಲ್ಲಿ ಹೆಚ್ಚಿನ ಪ್ರಮಾಣದ ಹಣ್ಣುಗಳು ಅಕ್ಟೋಬರ್ ತಿಂಗಳಿನಲ್ಲಿಯೇ ಕಾಣಿಸಿಕೊಂಡಿವೆ. ಹೀಗಾಗಿ ಬೆಳೆಗಾರರು ಕಾಫಿ ಕೊಯ್ಲು ಆರಂಭಿಸಲೇ ಬೇಕಿದೆ. ಇಲ್ಲದಿದ್ದಲ್ಲಿ ಕಾಫಿ ಹಣ್ಣುಗಳು ಉದುರಿಹೋಗುತ್ತವೆ. ಕಾಫಿ ಕೊಯ್ಲು ನಡೆಸಲು ಮಳೆ ಎಡಬಿಡದೆ ಸುರಿಯುತ್ತಿದೆ. ಒಂದು ವೇಳೆ ಕಾಫಿ ಕೊಯ್ಲು ಮಾಡಿದರೂ ಒಣಗಿಸುವುದು ಹೇಗೆ ಎಂಬುದೇ ತಿಳಿಯದೆ ಬೆಳೆಗಾರರು ಆತಂಕಕ್ಕೊಳಗಾಗಿದ್ದಾರೆ.

ಭತ್ತ, ರಾಗಿ, ತರಕಾರಿಗೂ ಸಂಕಷ್ಟ

ಜಿಲ್ಲೆಯ ಬಯಲು ಸೀಮೆ ಭಾಗದಲ್ಲಿ ಭತ್ತ, ರಾಗಿ ಹಾಗೂ ತರಕಾರಿ ಬೆಳೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಇದರೊಂದಿಗೆ ಮಲೆನಾಡು ಭಾಗದ ಗದ್ದೆಗಳಲ್ಲಿಯೂ ಭತ್ತ ಬೆಳೆಯಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಭತ್ತದ ಕೊಯ್ಲು ಆರಂಭಗೊಳ್ಳಲಿದ್ದು, ಮಳೆ ಬಿಡುವು ನೀಡದೇ ಇದ್ದಲ್ಲಿ ರೈತರು ಭತ್ತದ ಬೆಳೆ ಕಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಇದರೊಂದಿಗೆ ರಾಗಿ ಬೆಳೆಯೂ ಕಟಾವಿನ ಹಂತಕ್ಕೆ ಬಂದಿದ್ದು, ಇದೀಗ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಗಿ ಬೆಳೆಗೂ ಹಾನಿಯುಂಟಾಗುತ್ತಿದೆ. ಇದಲ್ಲದೆ ತರಕಾರಿ ಬೆಳೆಗಳು ಕುಂಭದ್ರೋಣ ಮಳೆಯಿಂದಾಗಿ ಜಲಾವೃತಗೊಂಡಿದ್ದು, ರೈತರು ಭಾರಿ ಪ್ರಮಾಣದಲ್ಲಿ ನಷ್ಟ ಅನುಭವಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net