ವಾಡಿ; ಭಕ್ತ, ಸ್ವಾಮಿ ಇಬ್ಬರೂ ಬದಲಾಗಲಿ- ಹಲಕರ್ಟಿ ಶ್ರೀ

PH 03
Published on

ವಾಡಿ: ಪ್ರವಚನ ಕೇಳಿ ಮಠ ಸೇರುವ ಸ್ವಾಮೀಜಿಗಳು ಮತ್ತು ಪುರಾಣ ಕೇಳಿ ಮನೆ ಸೇರುವ ಭಕ್ತರಲ್ಲಿ ಬದಲಾವಣೆ ಅವಶ್ಯವಿದೆ ಎಂದು ಹಲಕರ್ಟಿ ಕಟ್ಟಿಮನಿ ಹಿರೇಮಠದ ಶ್ರೀ ಮುನೀಂದ್ರ ಶಿವಾಚಾರ್ಯರು ಹೇಳಿದರು.

ಪಟ್ಟಣದ ಬಸವ ನಗರದಲ್ಲಿ ಸೋಮವಾರ ಹಮ್ಮಿಕೊಂಡ ನಂದೀಶ್ವರ ದೇವಸ್ಥಾನ ಲೋಕಾರ್ಪಣೆ ಹಾಗೂ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿ, ಇತ್ತೀಚೆಗೆ ಆಡಂಬರ ಅತಿಯಾಗಿ, ಹೆತ್ತವರು, ಗುರು ಹಿರಿಯರನ್ನು ಗೌರವಿಸುವ ಸಂಸ್ಕಾರ ದೂರಾಗುತ್ತಿದೆ. ಗುರು ಕೋಪ, ದ್ವೇಷ ಸುಟ್ಟು ಶಾಂತಿ, ಸಮಾಧಾನದಿಂದ ನಡೆದುಕೊಂಡರೆ ಭಕ್ತರಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದರು.

ಸೇಡAನ ಶ್ರೀ ಕಾರ್ತಿಕೇಶ್ವರ ಸ್ವಾಮೀಜಿ ಮಾತನಾಡಿ, ನಂದೀಶ್ವರ ದೇವಸ್ಥಾನದಲ್ಲಿ ನಂದಿ ಮತ್ತು ಈಶ್ವರ ಇಬ್ಬರನ್ನು ಕಾಣುತ್ತೇವೆ. ಮಠ ಮಂದಿರ ಕಟ್ಟುವ ಜತೆಗೆ ಅಲ್ಲಿ ಚಿಂತನೆ ನಡೆಯಬೇಕು ಎಂದರು.

ಶ್ರೀ ರಾಜಶೇಖರ ಸ್ವಾಮೀಜಿ, ಶ್ರೀ ಸಂಗಮೇಶ ದೇವರು, ರಜನಿ ಪಾಟೀಲ್ ಮಾತನಾಡಿದರು. ಹಲಕರ್ಟಿ ದರ್ಗಾ ಶರೀಫ್ ಅಬು ತುರಾಬ್ ಖಾದ್ರಿ, ನಾಗಪ್ಪಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿಜೆಪಿ ಮುಖಂಡ ಶಿವರಾಮ ಪವಾರ, ಶರಣಗೌಡ ಪಾಟೀಲ್, ಸಿದ್ದಣ್ಣ ಕಲಶೆಟ್ಟಿ, ಭೀಮಶಾ ಜಿರೊಳ್ಳಿ, ಸದಾಶಿವ ಕಟ್ಟಿಮನಿ, ರಮೇಶ ಕಾರಬಾರಿ, ತುಕಾರಾಮ ರಾಠೋಡ, ನಾಗರಾಜ ಪಂಚಾಳ, ರವಿ ಸಿಂಧಗಿ, ವಿಶ್ವನಾಥ ಸಜ್ಜನ, ವೀರಣ್ಣ ಯಾರಿ, ಬಸವರಾಜ ಕಿರಣಗಿ, ಕಾಶೀನಾಥ ಶೆಟಗಾರ, ಮಹ್ಮದ್ ಜಾಫರ್, ದಾನಪ್ಪ ಕಲಶೆಟ್ಟಿ, ಸತೀಶ ಸಾವಳಗಿ, ಶಂಕ್ರಯ್ಯಸ್ವಾಮಿ ಸ್ಥಾವರಮಠ, ಗುರುಮೂರ್ತಿ ಸ್ವಾಮಿ, ಶಿವಕುಮಾರ ಕಮರವಾಡಿ, ಶರಣಪ್ಪ ಜಡಗಿ, ಶ್ರೀಶೈಲ ಪೂಜಾರಿ, ಶ್ರೀಶೈಲ ಪುರಾಣಿಕ ಇತರರಿದ್ದರು.

ಡಾ.ಸುರೇಶ ಕುಲಕರ್ಣಿ ಸ್ವಾಗತಿಸಿದರು. ಸಿದ್ದಯ್ಯ ಶಾಸ್ತಿçà ನಂದೂರಮಠ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net