ವಾಡಿ ಪುರಸಭೆ ಕಾಂಗ್ರೆಸ್ ವಶ

03-09-wadi 02
Published on

ವಾಡಿ: ಇಲ್ಲಿನ ಪುರಸಭೆಯ 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಸದಸ್ಯರು ಆಯ್ಕೆಯಾಗುವ ಮೂಲಕ ಪುರಸಭೆಯಲ್ಲಿ ಕಾಂಗ್ರೆಸ್ ಅಧಿಪತ್ಯ ಮುಂದುವರಿದಿದೆ.
ಪುರಸಭೆ 23 ಸದಸ್ಯರ ಬಲ ಹೊಂದಿದ್ದು, 13 ಕಾಂಗ್ರೆಸ್, 7 ಬಿಜೆಪಿ ಹಾಗೂ 3 ಪಕ್ಷೇತರ ಸದಸ್ಯರಿದ್ದಾರೆ. ಸರಳ ಬಹುಮತಕ್ಕೆ 13 ಸದಸ್ಯರ ಬಲ ಅವಶ್ಯವಿತ್ತು. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಎ), ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು.
ಗುರುವಾರ ಹಮ್ಮಿಕೊಂಡಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ನಿಂದ ವಾರ್ಡ್​ 12ರ ಸದಸ್ಯೆ ಝರೀನಾ ಬೇಗಂ ಅವರು ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯಿಂದ ಯಾರೊಬ್ಬರೂ ಉಮೇದುವಾರಿಕೆ ಸಲ್ಲಿಸದಿರುವುದರಿಂದ ಅವಿರೋಧ ಆಯ್ಕೆ ನಡೆಯಿತು. ಇನ್ನು ಉಪಾಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ನಿಂದ ತಿಮ್ಮಯ್ಯ ಪವಾರ್, ಬಿಜೆಪಿಯಿಂದ ಶೋಭಾ ಪವಾರ್ ನಾಮಪತ್ರ ಸಲ್ಲಿಸಿದ್ದರು. ಸಹಜವಾಗಿ ತಿಮ್ಮಯ್ಯ ಅವರು 15 ಮತ ಪಡೆದು ಗೆಲುವಿನ ನಗೆ ಬೀರಿದರೆ, 8 ಮತಗಳು ಪಡೆದ ಶೋಭಾ ಪರಾಭವಗೊಂಡರು.
ಬಿಜೆಪಿಯಲ್ಲಿ ಹಿಂದುಳಿದ ವರ್ಗ(ಎ) ಕೆಟಗಿರಿಯಲ್ಲಿ ಯಾರು ಬರುತ್ತಾರೆ ಎಂಬ ಗೊಂದಲದಲ್ಲೇ ಯಾರೊಬ್ಬರೂ ನಾಮಪತ್ರ ಸಲ್ಲಿಸಲಿಲ್ಲ. ಇದು ಕಾಂಗ್ರೆಸ್ ಪ್ಲಸ್ ಪಾಯಿಂಟ್ ಆಯ್ತು. ಕಾಂಗ್ರೆಸ್ನಲ್ಲೂ ಅಧ್ಯಕ್ಷ ಗಾದಿಗಾಗಿ ತೀವ್ರ ಪೈಪೋಟಿ ನಡೆಯಿತು. 5 ಆಕಾಂಕ್ಷಿಗಳ ಮಧ್ಯೆ ಶಾಸಕ ಪ್ರಿಯಾಂಕ್ ಖಗರ್ೆ ಅವರ ಕೃಪಾ ಕಟಾಕ್ಷದಿಂದಾಗಿ ಝರೀನಾ ಬೇಗಂ ಗೆಲುವು ಸಾಧಿಸಿ ಗದ್ದುಗೆ ಏರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net