

ಶಿವಮೊಗ್ಗ: ನಿವೃತ್ತ ಉದ್ಯೋಗಿಯ ವಾಟ್ಸ್‌ಆ್ಯಪ್‌ಗೆ ಸಂಚಾರ ನಿಯಮ ಉಲ್ಲಂಘನೆ ಚಲನ್ ಎಂದು ಎಪಿಕೆ ಫೈಲ್ ಕಳುಹಿಸಿ ಮೂರು ಬ್ಯಾಂಕ್ ಖಾತೆಗಳಿಂದ 7.42 ಲಕ್ಷ ರೂ. ಆನ್‌ಲೈನ್ ಮೂಲಕ ವಂಚಿಸಲಾಗಿದೆ.
ಏ.2ರಂದು ನಿವೃತ್ತ ಉದ್ಯೋಗಿಯ ವಾಟ್ಸ್‌ಆ್ಯಪ್‌ಗೆ ಟ್ರಾಫಿಕ್ ಚಲನ್ 1000 ಎಂದು ಪಿಡಿಎಫ್ ಫೈಲ್ ಮಾದರಿಯಲ್ಲಿರುವ ಎಪಿಕೆ ಫೈಲ್ ಬಂದಿತ್ತು. ಅದನ್ನು ಕ್ಲಿಕ್ ಮಾಡಿದಾಗ ಕರ್ನಾಟಕ ಸರ್ಕಾರದ ಚಿಹ್ನೆ ಇತ್ತು. ಏ.8ರಂದು ನಿವೃತ್ತ ಉದ್ಯೋಗಿ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತನೊಬ್ಬ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿದೆ ಎಂದು ತಿಳಿಸಿದ್ದ. ನಿವೃತ್ತ ಉದ್ಯೋಗಿಯು ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದಾಗ ಎಸ್‌ಬಿಐ ಬ್ಯಾಂಕ್‌ನ ಒಂದು ಖಾತೆಯಿಂದ 7 ಬಾರಿ ಹಣ ಕಡಿತವಾಗಿತ್ತು. ಎಸ್‌ಬಿಐ ಬ್ಯಾಂಕ್‌ನ ಮತ್ತೊಂದು ಖಾತೆಯಿಂದ 9 ಬಾರಿ ಹಣ ಕಡಿತವಾಗಿತ್ತು. ಕರ್ಣಾಟಕ ಬ್ಯಾಂಕ್‌ನ ಖಾತೆಯಿಂದ ಒಟ್ಟು 6 ಬಾರಿ ಹಣ ಕಡಿತವಾಗಿತ್ತು. ಮೂರು ಬ್ಯಾಂಕ್ ಖಾತೆಗಳಿಂದ ಒಟ್ಟು 7.42 ಲಕ್ಷ ರೂ. ಕಡಿತವಾಗಿರುವುದು ಗೊತ್ತಾಗಿದೆ. ಕೂಡಲೇ 1930 ಹೆಲ್ಪ್‌ಲೈನ್ ನಂಬರ್‌ಗೆ ಕರೆ ಮಾಡಿದ ನಿವೃತ್ತ ಉದ್ಯೋಗಿ, ಬಳಿಕ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.