ವಾಟಾಳ್ ನಾಗರಾಜ & ಟೀಂ ಪೊಲೀಸ್ ವಶಕ್ಕೆ

IMG-20201201-WA0014
Published on

ವಿಜಯಪುರ: ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ವಾಟಾಳ್ ನಾಗರಾಜ ಪ್ರತಿಭಟನೆ ನಡೆಸಲು ಆಗಮಿಸುತ್ತಿದ್ದ ವೇಳೆ ವಾಟಾಳ್ ನಾಗರಾಜ ಹಾಗೂ ಅವರ ತಂಡವನ್ನು ವಶಕ್ಕೆ ಪಡೆಯಲಾಗಿದೆ. ವಿಜಯಪುರ ಜಿಲ್ಲಾ ಪೊಲೀಸರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ, ನಿಡಗುಂದಿ ತಾಲೂಕಿನ ಯಲಗೂರ ಕ್ರಾಸ್ ಬಳಿ 15ಕ್ಕೂ ಅಧಿಕ ಹೋರಾಟಗಾರರ ಬಂಧನ ಮಾಡಿದ್ದಾರೆ. ವಾಟಾಳ್ ನಾಗರಾಜ್, ಸಾ ರಾ ಗೋವಿಂದು ಸೇರಿ ಇನ್ನಿತರ ಪ್ರತಿಭಟನಾಕಾರರ ಬಂಧಿಸಲಾಗಿದೆ. ಪೊಲೀಸರ ಬಂಧನದ ವೇಳೆ ಕಪ್ಪು ಬಟ್ಟೆಯನ್ನು ಹೋರಾಟಗಾರರು ಪ್ರದರ್ಶಿಸಿದ್ದಾರೆ. ಮರಾಠಾ ಅಭಿವೃದ್ಧಿ ನಿಗಮ ಜಾರಿ ಖಂಡಿಸಿ ಇಂದು ವಿಜಯಪುರದಲ್ಲಿ ಪ್ರತಿಭಟನೆ ನಡೆಸಲು ಹೊರಟಿದ್ದ ಕನ್ನಡಪರ ಸಂಘಟನೆಗಳ ಹೋರಾಟಗಾರರನ್ನು ಬಂಧಿಸಲಾಗಿದೆ. ಇದೇ ವೇಳೆ ಆಕ್ರೋಶ ಹೊರ ಹಾಕಿದ ವಾಟಾಳ್ ನಾಗರಾಜ್ ಯಡಿಯೂರಪ್ಪರದ್ದು ಗೂಂಡಾ ಸರ್ಕಾರ, ನಮಗೆ ಪ್ರತಿಭಟನೆಗೆ ಅವಕಾಶ ಮಾಡಿಕೊಡಬೇಕಿತ್ತು, 60 ಕಿ.ಮೀ ದೂರದಲ್ಲೇ ತಡೆದಿದ್ದಾರೆ, ನನ್ನ ಜೀವಮಾನದಲ್ಲೇ ಇಷ್ಟು ದೂರದಲ್ಲಿ ಬಂಧಿಸಿದ್ದನ್ನು ಕಂಡಿಲ್ಲ ಎಂದು ಆಕ್ರೋಶ ಹೊರಹಾಕಿದ್ರು. ಅಲ್ಲದೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧವೂ ಹರಿಹಾಯ್ದು, ಕಿಡಿ ಕಾರಿದ್ರು. ಇಂದು ನಮ್ಮನ್ನು ಪೊಲೀಸರು ಬಂಧಿಸಿದ್ದಾರೆ, ಮುಂದಿನ ಹದಿನೈದು ದಿನಗಳಲ್ಲಿ ಮತ್ತೆ ಬಂದು ಡಿಸಿ ಕಚೇರಿ ಎದುರು ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದ್ರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net