ವಾಟಾಳು ಶ್ರೀಗೆ ಬೆಳ್ಳಿ ಕಿರೀಟ ಧಾರಣೆ ಇಂದು

23tnpnewsfile02 (2)
ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ
Published on

ತಿ.ನರಸೀಪುರ: ವಾಟಾಳು ಶ್ರೀ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ ಅವರ 74ನೇ ಹುಟ್ಟುಹಬ್ಬ ಆಚರಣೆ ಸಮಾರಂಭವನ್ನು ಡಿ.24ರಂದು ಆಯೋಜಿಸಲಾಗಿದೆ.

ಸಂಜೆ 6 ಗಂಟೆಗೆ ಹೆಳವರಹುಂಡಿ ಗ್ರಾಮದಲ್ಲಿ 74ನೇ ಜನ್ಮ ವರ್ಧಂತ್ಸುತ್ಸವ ಪ್ರಯುಕ್ತ ಸೇವಾಶ್ರಯ ಫೌಂಡೇಷನ್, ಆಟೋ ಚಾಲಕರು ಆಯೋಜಿಸಿರುವ ಸಮಾರಂಭದಲ್ಲಿ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಬೆಳ್ಳಿ ಕಿರೀಟ ಧಾರಣೆ ಮಾಡಲಾಗುತ್ತದೆ. ತಿ.ನರಸೀಪುರ ಶಾಸಕ ಎಂ.ಅಶ್ವಿನ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ವರುಣ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಷ್ಣು ಮ್ಯೂಸಿಕಲ್ ಗ್ರೂಪ್‌ನಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗ್ಗೆ 9ಗಂಟೆಗೆ ವಾಟಾಳು ಮಠದಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net