ವಾಜುಪೇಯಿ ಅಪರೂಪದ ರಾಜಕಾರಣಿ

25ydg03
Published on

ಯಾದಗಿರಿ: ಅಟಲ್ ಬಿಹಾರಿ ವಾಜಪೇಯಿ ಈ ದೇಶ ಕಂಡ ಅಪರೂಪದ ಜನನಾಯಕ, ಧೀಮಂತ ರಾಜಕಾರಣಿ. ಅವರ ಬದುಕು ಹಾಗೂ ಜನಪರ ಕಾಳಜಿ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಬೇಕಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ಹೇಳಿದರು.

ಸೋಮವಾರ ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ವಾಜಪೇಯಿ ಅವರ 89ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದ ಒಳಿತಾಗಾಗಿ ದುಡಿಯಬೇಕೆಂಬ ಕೆಲವೇ ರಾಜಕೀಯ ಧುರೀಣರಲ್ಲಿ ಮಾಜಿ ಪ್ರಧಾನಿ ಅಟಲ್ಜಿ ಪ್ರಮುಖರು. ದೇಶವನ್ನು ಪ್ರಗತಿಯ ಪಥದಲ್ಲಿ ಕೊಂಡೊಯ್ದ ಧೀಮಂತ ನಾಯಕ ಅವರಾಗಿದ್ದಾರೆ ಎಂದು ಎಂದು ಬಣ್ಣಿಸಿದರು.

ವೆಂಕಟರಡ್ಡಿ ಅಬ್ಬೆತುಮಕೂರು ಮಾತನಾಡಿ, ವಾಜಪೇಯಿ ಅವರು ದೇಶ ಕಂಡ ಅಪೂರ್ವ ಚಿಂತಕ, ಕವಿ ಹಾಗೂ ಹೆಮ್ಮೆಯ ಪ್ರಧಾನಿ. ಅವರ ಆದರ್ಶಗಳು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ದೇಶದ ನಾಲ್ಕೂ ಮೂಲೆಗಳಿಗೂ ಸಂಪರ್ಕ ಕಲ್ಪಿಸುವ 15 ಸಾವಿರ ಕಿ.ಮೀಟರ್ ಉದ್ದದ ಸುವರ್ಣ ಚತುಷ್ಪಥ ಹೆದ್ದಾರಿಯನ್ನು ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಿದ ಕೀತರ್ಿ ವಾಜಪೇಯಿ ಅವರಿಗೆ ಸಲ್ಲುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net