ವಸುದೈವ ಕುಟುಂಬಕಂ ಪುಸ್ತಕ ವಿತರಣೆ

V.K. inter national school
Published on

ಬೀದರ್: ಡಾ.ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ಪ್ರಕಟಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಕಲ್ಯಾಣ ಯೋಜನೆಗಳ `ವಸುದೈವ ಕುಟುಂಬಕಂ' ಕೃತಿಗಳನ್ನು ವಿದ್ಯಾನಗರ ಕಾಲನಿಯ ವಿ.ಕೆ. ಇಂಟರ್ ನ್ಯಾಷನಲ್ ಶಾಲಾ-ಕಾಲೇಜುಗಳಲ್ಲಿ ವಿತರಿಸಲಾಯಿತು.

ಪುಸ್ತಕ ವಿತರಿಸಿದ ಫೌಂಡೇಷನ್ ಅಧ್ಯಕ್ಷರೂ ಆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ಸರ್ಕಾರದ ಜನಕಲ್ಯಾಣ ಯೋಜನೆಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಫೌಂಡೇಷನ್ ಪುಸ್ತಕಗಳನ್ನು ಪ್ರಕಟಿಸಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಸಂಪೂರ್ಣ ಮಾಹಿತಿ ಇದೆ. ಅರ್ಹ ಫಲಾನುಭವಿಗಳು ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಬಸವ ತತ್ವ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ವೈಜಿನಾಥ ಕಮಠಾಣೆ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ ಪಾಟೀಲ್, ಬಸವ ತತ್ವ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ದಿಲೀಪ ಕಮಠಾಣೆ, ಯುವ ಮುಖಂಡ ಶಿವಕುಮಾರ ಭಾಲ್ಕೆ, ವಿ.ಕೆ. ಇಂಟರ್ ನ್ಯಾಷನಲ್ ಶಾಲೆ ಆಡಳಿತಾಕಾರಿ ಜೀನ್ಸ್ ಕೆ.ಥಾಮಸ್, ಪ್ರಾಚಾರ್ಯೆ ರೋಶ್ನಿ ಕೆ.ಥಾಮಸ್, ಪದವಿ ಕಾಲೇಜು ಪ್ರಾಚಾರ್ಯ ನಾಗೇಶ ಬಿರಾದಾರ್, ಮುಖ್ಯ ಶಿಕ್ಷಕ ರವಿ ದೇವಾ, ಕಮಠಾಣೆ ಬಿ.ಇಡಿ ಕಾಲೇಜು ಪ್ರಾಚಾರ್ಯ ಧನರಾಜ ಪಾಟೀಲ್, ಉಪನ್ಯಾಸಕಿ ಶಿವಲೀಲಾ ಟೊಣ್ಣೆ, ಪ್ರದೀಪ ಗಾಜಲ್, ಝರಣಪ್ಪ ಹೊಸಳ್ಳಿ ಇತರರಿದ್ದರು. ಮಹ್ಮದ್ ಯುನೂಸ್ ನಿರೂಪಣೆ ಮಾಡಿದರು. ವಿಜಯಲಕ್ಷ್ಮೀ ವಂದಿಸಿದರು.ಇದಕ್ಕೂ ಮೊದಲು ನಾಗಮಾರಪಳ್ಳಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಸ್ಮಾಟ್೯ ಕ್ಲಾಸ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net