ವಸತಿ ನಿಲಯ ನಿರ್ಮಾಣಕ್ಕೆ 5 ಲಕ್ಷ ರೂ.ದೇಣಿಗೆ

JDS
Published on

ಕಲಬುರಗಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ನಗರದಲ್ಲಿ ನಿಮರ್ಾಣವಾಗುತ್ತಿರುವ ಮಹಿಳಾ ವಸತಿನಿಲಯದ ಲೈಬ್ರರಿ ಹಾಲ್ಗಾಗಿ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ 5 ಲಕ್ಷ ರೂ.ದೇಣಿಗೆ ನೀಡಿದ್ದಾರೆ.

ಶನಿವಾರ ಶಾಸಕರ ಪುತ್ರ, ಜೆಡಿಎಸ್ನ ರಾಜ್ಯ ಯುವ ನಾಯಕ ಶರಣಗೌಡ ಕಂದಕೂರ ಕಟ್ಟದ ನಿರ್ಮಾಣ ಸಮಿತಿ ಅಧ್ಯಕ್ಷರೂ ಆದ , ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪೂರಗೆ ದೇಣಿಗೆ ಚೆಕ್ ಹಸ್ತಾಂತರಿಸಿದರು.

ಈ ವೇಳೆ ಮಾತನಾಡಿದ ಅವರು, ಸಮಾಜದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮ ಶ್ಲಾಘನೀಯವಾಗಿದೆ. ಶೀಘ್ರದಲ್ಲಿ ಭವ್ಯ ಕಟ್ಟಡ ನಿರ್ಮಾಣಗೊಂಡು ಭವಿಷ್ಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ನೆರವಾಗಲಿ ಎಂದು ಹಾರೈಸಿದರು.

ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಶರಣಕುಮಾರ ಮೋದಿ, ಡಾ.ಶರಣ ಪಾಟೀಲ್, ಅಶೋಕ ಹೊನ್ನಳ್ಳಿ, ರವೀಂದ್ರ ಹೊನ್ನಳ್ಳಿ, ನಾಗರಾಜಗೌಡ ಬಿಳ್ಹಾರ, ಮಲ್ಲಣಗೌಡ ಹಳಿಮನಿ ಕೌಳೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net