

ಚನ್ನರಾಯಪಟ್ಟಣ: ಪಟ್ಟಣದ ಪಿಡಬ್ಲುೃಡಿ ಕಚೇರಿ ಹಿಂಭಾಗದಲ್ಲಿರುವ ನಿವೇಶನದಲ್ಲಿ ವಸತಿ ಗೃಹಗಳ ಸಮುಚ್ಚಯ ನಿರ್ಮಾಣಕ್ಕೆ ಶಾಸಕ ಸೋಮವಾರ ಸಿ.ಎನ್.ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು.
ಪಿಡಬ್ಲುೃಡಿ ಇಲಾಖೆಯ 4216 ಲೆಕ್ಕ ಶೀರ್ಷಿಕೆಯಡಿ 4.98 ಕೋಟಿ ರೂ. ವೆಚ್ಚದಲ್ಲಿ ವಸತಿ ಗೃಹಗಳ ಸಮುಚ್ಚಯ ನಿರ್ಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ 8 ರಿಂದ 10 ವಸತಿ ಗೃಹಗಳನ್ನು ನಿರ್ಮಿಸಲು ವಿಶೇಷ ಕ್ರಮ ವಹಿಸುವುದಾಗಿ ತಿಳಿಸಿದರು.
ಇಲ್ಲಿನ ಪ್ರವಾಸಿ ಮಂದಿರವನ್ನು 1.5 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಳಿಸಲಾಗಿದೆ. ಹಿರೀಸಾವೆ ಹಾಗೂ ಬಾಗೂರಿಗೆ ಪ್ರವಾಸಿ ಮಂದಿರ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು. ಹಿರೀಸಾವೆ ಬಳಿ ಸೇತುವೆ ಶಿಥಿಲಗೊಂಡಿದ್ದು, ದುರಸ್ತಿಗಾಗಿ 1 ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಸಂಬಂಧಪಟ್ಟ ಸಚಿವರಲ್ಲಿ ಮನವಿ ಮಾಡಲಾಗಿದೆ ಎಂದು ವಿವರಿಸಿದರು.
ಗುತ್ತಿಗೆದಾರ ಅರುಣ್, ಪ್ರಭಾರಿ ಎಇಇ ಮಂಜಣ್ಣಯ್ಯ, ಅರುಣ್ ಇತರರಿದ್ದರು.