ವಸತಿ ಹಕ್ಕುಪತ್ರ,ವಾರದೊಳಗೆ ವರದಿ ಸಲ್ಲಿಕೆಗೆ ಸಿಪಿಒ ನಿರ್ದೇಶನ

CTD BUDU NERRU---
Published on

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ಹಾನಗಲ್ ಗ್ರಾಪಂ ವ್ಯಾಪ್ತಿಯ ಹಾನಗಲ್,ಕಾಟನಾಯಕನಹಳ್ಳಿ, ಕೆಳಗಳಹಟ್ಟಿ ಗ್ರಾಮಗಳಿಗೆ ಬುಧವಾರ ಜಿಪಂ ಮುಖ್ಯಯೋಜನಾಧಿಕಾರಿ ಗಾಯತ್ರಿ ಅವರು ಭೇಟಿ ನೀಡಿ, ಬೂದು ನೀರು ನಿರ್ವಹಣೆ ಕಾಮಗಾರಿ ಪರಿಶೀಲಿಸಿದರು. ಗ್ರಾಮ ಪಂಗೆ ಭೇಟಿ ನೀಡಿ, ಘನತ್ಯಾಜ್ಯ ಘಟಕಗಳಲ್ಲಿ ಕಸ ನಿರ್ವಹಣೆ, ಸಮುದಾಯ ಶೌಚಗೃಹಗಳ ನಿರ್ವಹಣೆ, ವೈಯಕ್ತಿಕ ಗೃಹ ಶೌಚಗೃಹ ಗಳ ಕಾರ್ಯಾದೇಶ, ಪ್ರೋತ್ಸಾಹಧನ ಪಾವತಿ ಆದೇಶ ಇತ್ಯಾದಿ ಪ್ರಗತಿ ಪರಿಶೀಲಿಸಿದರು.

ರಾಯಾಪುರ ಗ್ರಾಪಂ ವ್ಯಾಪ್ತಿಯ ರಾಯಾಪುರ ಗ್ರಾಮಕ್ಕೆ ಭೇಟಿ ನೀಡಿ,ಸುಡುಗಾಡು ಸಿದ್ಧರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸ ಲು ದಾಖಲೆಗಳನ್ನು ಪರಿಶೀಲಿಸಿ ವಾರದೊಳಗೆ ವರದಿ ನೀಡುವಂತೆ ತಾಲೂಕು ನೋಡಲ್ ಅಧಿಕಾರಿ(ವಸತಿ)ಗೆ ಸೂಚಿಸಿದರು. ಚಳ್ಳಕೆರೆ ತಾಲೂಕು ಅಬ್ಬೇನಹಳ್ಳಿ ಗ್ರಾಪಂ ವ್ಯಾಪ್ತಿಯ ತೊರೆ ಕೊಲಮ್ಮನಹಳ್ಳಿಗೆ ತೆರಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಪರಿ ಶೀಲಿಸಿದರು. ಚಿತ್ರದುರ್ಗ ತಾಲೂಕಿನ ಮಾಡನಾಯಕನಹಳ್ಳಿ ಗ್ರಾಪಂನಲ್ಲಿ ಎನ್‌ಆರ್‌ಎಲ್‌ಎಂ ಯೋಜನೆ ಹಾಗೂ ಸ್ವಚ್ಛ ಭಾರತ್ ಮಿಷನ್(ಗ್ರಾ)ಯೋಜನೆ ಪ್ರಗತಿ ಪರಿಶೀಲಿಸಿದರು.

ಮೊಳಕಾಲ್ಮೂರು ತಾಪಂ ಸಹಾಯಕ ನಿರ್ದೇಶಕ ಯಶವಂತ್,ಪಿಡಿಒ ಸುರೇಶ್,ಸ್ವಚ್ಛ ಭಾರತ್ ಮಿಷನ್(ಗ್ರಾ)ಜಿಲ್ಲಾ ಐಇಸಿ ಸ ಮಾ ಲೋಚಕ ಬಿ.ಸಿ.ನಾಗರಾಜು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಜೆಇ ರೇಖಾ,ಮಲ್ಲಿಕಾರ್ಜುನ, ಪ್ರಜ್ವಲ್ ಗ್ರಾಪಂ ಸದಸ್ಯರು,ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net