ಶಿಕ್ಷಕರು ಉತ್ತಮವಾಗಿ ಕಲಿಸುತ್ತಿದ್ದಾರೆಯೇ? ರುಚಿಕರವಾದ ತಿಂಡಿ, ಊಟ ನೀಡುತ್ತಿದ್ದಾರಾ? ವಾಸದ ಕೊಠಡಿಯಲ್ಲಿ ಆರಾಮದಾಯಕವಾಗಿ ಇರಬಹುದಾ? ಶೌಚಾಲಯವು ಯಾವಾಗಲೂ ಶುಚಿತ್ವವಾಗಿರುತ್ತದಾ? ಏನಾದರೂ ಸಮಸ್ಯೆ ಇದೆಯಾ ಎಂದು ಮಕ್ಕಳನ್ನು ಪ್ರಶ್ನಿಸಿ, ಪ್ರತಿಕ್ರಿಯೆ ಪಡೆದರು. ಬಳಿಕ ಭೋಜನಾಲಯಕ್ಕೆ ಭೇಟಿ ನೀಡಿ ದಾಸ್ತಾನು ಕೊಠಡಿ ಪರಿಶೀಲಿಸಿದರು. ಚಹಾ ಸವಿಯುತ್ತಾ ಮಾತನಾಡಿ, ಗ್ರಾಮೀಣ ಭಾಗದ ಅನೇಕ ಮಕ್ಕಳು ಕಲಿಯಲು ಇಲ್ಲಿಗೆ ಬರುತ್ತಾರೆ. ನಿಲಯಪಾಲಕರು ಪ್ರೀತಿಯಿಂದ ನೋಡಿಕೊಳ್ಳಬೇಕು. ಶಿಕ್ಷಕರು ತಮಗೆ ನೀಡಿರುವ ವಸತಿ ಗೃಹದಲ್ಲಿ ಕಡ್ಡಾಯವಾಗಿ ಇರಬೇಕು. ಮಕ್ಕಳ ಆರೋಗ್ಯದಲ್ಲಿ ಜಾಗರೂಕತೆ ವಹಿಸಬೇಕು ಎಂದು ಸೂಚಿಸಿದರು.