ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ

Application-1-1280x720
Published on

ಚಿತ್ರದುರ್ಗ:ಜಿಲ್ಲೆಯ ಮುರಾರ್ಜಿ ದೇಸಾಯಿ,ಕಿತ್ತೂರು ರಾಣಿ ಚೆನ್ನಮ್ಮ, ಡಾ.ಬಿ.ಆರ್.ಅಂಬೇಡ್ಕರ್, ಶ್ರೀಮತಿ ಇಂದಿರಾಗಾಂಧಿ ವ ಸತಿ ಶಾಲೆಗಳಲ್ಲಿ 2025-26ನೇ ಸಾಲಿಗೆ 6ನೇ ತರಗತಿ ದಾಖಲಾತಿಯ ಪ್ರವೇಶ ಪರೀಕ್ಷೆಗೆ ಜನವರಿ 25ರೊಳಗೆ ಅರ್ಜಿ ಆಹ್ವಾನಿಸಲಾಗಿದೆ. ಫೆ.15 ರಂದು ಮಧ್ಯಾಹ್ನ 2.30 ರಿಂದ 4.30 ರವರೆಗೆ ಪ್ರವೇಶ ಪರೀಕ್ಷೆ ನಡೆಯಲಿದೆ.

ಜಿಲ್ಲೆಯ ಯಾವುದೇ ಶಾಲೆಯಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪಾಲಕರು ತಮಗೆ ಸಮೀಪವಿರುವ ಜಿಲ್ಲೆ ಯ ಯಾವುದೇ ವಸತಿ ಶಾಲೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ವಿದ್ಯಾರ್ಥಿ SATS ಸಂಖ್ಯೆ, ಜಾತಿ ಮತ್ತು ಆ ದಾಯ, ಮೀಸಲು ಪ್ರಮಾಣ ಪತ್ರ,ಈಚಿನ ಭಾವಚಿತ್ರ ಅಗತ್ಯ. ಅರ್ಜಿ ಸಲ್ಲಿಕೆ ವೇಳೆ ತಾವು ಪ್ರವೇಶ ಬಯಸುವ ವಸತಿ ಶಾಲೆಗಳನ್ನು ಆ ದ್ಯತಾ ಕ್ರಮದಲ್ಲಿ ಆಯ್ಕೆ ಮಾಡಬೇಕು. ಮೆರಿಟ್,ಮೀಸಲಾತಿ ಹಾಗೂ ಪ್ರವೇಶ ಬಯಸುವ ಶಾಲೆಗಳ ಆದ್ಯತಾ ಕ್ರಮದ ಮೇಲೆ ಕರ್ನಾ ಟಕ ಪರೀಕ್ಷಾ ಪ್ರಾಧಿಕಾರದಿಂದ Computerised Auto Selection ಮೂಲಕ ಸೀಟು ಹಂಚಿಕೆ ಮಾಡಲಾಗುವುದು. ಹೆ ಚ್ಚಿನ ಮಾಹಿತಿಗಾಗಿ ಸಮೀಪದ ವಸತಿ ಶಾಲೆಗಳ ಪ್ರಾಂಶುಪಾಲರು ಅಥವಾ ಕೆಇಎ ಸಹಾಯವಾಣಿ ಸಂಖ್ಯೆ 080-23460460ನ್ನು ಸಂ ಪರ್ಕಿಸಬಹುದೆಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ತಿಳಿಸಿದ್ದಾರೆ.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net