ವಸತಿ ರಹಿತರಿಗೆ ಹಕ್ಕುಪತ್ರ ನೀಡಿ

16ark1
Published on

 ಅರಕಲಗೂಡು: ತಾಲೂಕಿನ ರಾಮನಾಥಪುರದಲ್ಲಿ ವಸತಿ ರಹಿತರಿಗೆ ಹಕ್ಕುಪತ್ರ ನೀಡಿ ಮೂರು ವರ್ಷ ಕಳೆದರೂ ಖಾತೆ ಮಾಡಿಕೊಡದೆ ನಿರ್ಲಕ್ಷ್ಯಿಸಲಾಗಿದೆ ಎಂದು ಆರೋಪಿಸಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಸದಸ್ಯರು ಮತ್ತು ವಸತಿ ರಹಿತರು ಮಂಗಳವಾರ ಪ್ರತಿಭಟನೆ ನಡೆಸಿದರು.

ರಾಮನಾಥಪುರ ಗ್ರಾಪಂ ಕಚೇರಿ ಎದುರು ಧರಣಿ ಕುಳಿತು ಸೂರಿಲ್ಲದೆ ವಸತಿ ರಹಿತರಿಗೆ ನಿವೇಶನ ನೀಡಬೇಕು ಎಂದು ಘೋಷಣೆ ಕೂಗಿದರು.

ಜಿಪಂ ಮಾಜಿ ಸದಸ್ಯ ಎಚ್.ಎಸ್. ಶಂಕರ್, ಗ್ರಾಪಂ ಮಾಜಿ ಅಧ್ಯಕ್ಷ ಕಾಳೇಗೌಡ, ಮಾಜಿ ಸದಸ್ಯ ದಿವಾಕರ್, ವಿಜಯಕುಮಾರ್, ರಾಮೇಗೌಡ, ಸುವರ್ಣ ಕರ್ನಾಟಕ ಸೇನೆಯ ಸುದೀಪ್‌ಗೌಡ, ಮಣಿಮಲ್ಲೇಶ್, ರಮೇಶ್, ಪ್ರಕಾಶ್‌ಗೌಡ, ಆನಂದ್ ಆಚಾರ್, ಜಗದೀಶ್‌ಗೌಡ, ಗಿರೀಶ್ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net