

ಯಾದಗಿರಿ: ಒಂದಡೆ ಬಹುತೇಕ ಜನರು ಮಂಗಳವಾರ ನಾಗರಪಂಚಮಿ ಹಬ್ಬ ಆಚರಿಸುವಲ್ಲಿ ಮಗ್ನರಾಗಿದ್ದರೇ, ಇತ್ತ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಬೆಳಂಬೆಳಗ್ಗೆ ವಿವಿಧ ಇಲಾಖೆಗಳ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಕಂಡು ಗರಂ ಆಗಿ ಸಂಬAಧಪಟ್ಟವರನ್ನು ಕ್ಲಾಸ್ ತೆಗೆದುಕೊಂಡ ಘಟನೆ ನಡೆಯಿತು.
ನಗರದ ಹೊಸಳ್ಳಿ ಕ್ರಾಸ್ ಸಮೀಪದ ಮೆಟ್ರಿಕ್ ನಂತರದ ಇಂದಿರಾಗಾAಧಿ ನರ್ಸಿಂಗ್ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ, ನಿಲಯದ ಎಲ್ಲೆಡೆ ಸಂಚರಿಸಿ ಖುದ್ದಾಗಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು. ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿದೆ. ಶೌಚಗೃಹ ಸ್ವಚ್ಛವಿಲ್ಲ, ಗುಣಮಟ್ಟದ ಊಟ ನೀಡುತ್ತಿಲ್ಲ ಎಂದು ಅಲ್ಲಿದ್ದ ವಿದ್ಯಾರ್ಥಿಗಳು ಕೋಸಂಬೆ ಅವರ ಗಮನಕ್ಕೆ ತಂದರು.
ನಂತರ ವಸತಿ ನಿಲಯದ ಅಡುಗೆ ಕೋಣೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಅಗತ್ಯ ಆಹಾರ ಸಾಮಾಗ್ರಿಗಳ ಕೊರತೆ ಇರುವುದನ್ನು ಕಂಡು ಗರಂ ಆದರು. ಶೌಚಗೃಹ ಸ್ವಚ್ಛತೆ ಇಲ್ಲ. ಬೀಸಿ ನೀರಿಲ್ಲ. ಊಟ ಸರಿಯಾಗಿ ಕೊಡುತ್ತಿಲ್ಲ ಎಂಬುದನ್ನು ಕೇಳಿ ವಾರ್ಡನ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಸರ್ಕಾರ ಎಲ್ಲ ಸೌಲಭ್ಯ ನೀಡಿದರೂ ಅದನ್ನು ಕೊಡಲು ನಿಮಗೇನು ದಾಡಿ ಎಂದು ಗ್ರಾಮೀಣ ಭಾಷೆಯಲ್ಲಿ ತರಾಟೆಗೆ ತೆಗೆದುಕೊಂಡರು. ಇನ್ನೊಮ್ಮೆ ನಾನು ಬಂದು ಭೇಟಿ ನೀಡಿದಾಗ ಈ ಎಲ್ಲ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಅಲ್ಲದೆ ಇನ್ಮುಂದೆ ಹೀಗಾಗದಂತೆ ಎಚ್ಚರ ವಹಿಸಬೇಕು ಎಂದು ತಾಕೀತು ಮಾಡಿದರು.
ಈ ವೇಳೆ ಜಿ¯್ಲÁ ಮಕ್ಕಳ ರP್ಷÀಣಾಧಿಕಾರಿ ನಿರ್ಮಲಾ ಸುರಪುರ, ಬಿಸಿಎಂ ಇಲಾಖೆ ಡಿಡಿ ಸದಾಶೀವ ನಾರಾಯಣ, ಸಮಾಜ ಕಲ್ಯಾಣ ಇಲಾಖೆ ಡಿಡಿ ಚನ್ನಬಸಪ್ಪ, ಡಿಎಚ್‌ಒ ಡಾ.ಮಹೇಶ ಬಿರಾದಾರ, ಡಾ.ರಿಜ್ವಾನಾ ಆಫ್ರಿನ್, ಡಾ.ಕುಮಾರ ಅಂಗಡಿ ಇತರರಿದ್ದರು.