ವಸತಿ ನಿಲಯಗಳಲ್ಲಿ ಆರೋಗ್ಯಕರ ವಾತಾವರಣವಿರಲಿ

IMG20230523124842-006
Published on

ಚಿತ್ರದುರ್ಗ: ವಸತಿ ನಿಲಯಗಳ ಪಾಲಕರು ಆಡಳಿತಾತ್ಮಕ ವಿಷಯಗಳ ನಿರ್ವಹಣೆಯೊಂದಿಗೆ ವಸತಿ ನಿಲಯಗಳಲ್ಲಿ ಆರೋಗ್ಯಕರ ವಾತಾವರಣವನ್ನೂ ಕಾಪಾಡಲು ಗಮನ ಹರಿಸಬೇಕಿದೆ ಎಂದು ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ‌್ಯೆ ಸವಿತಾ ಹೇಳಿದರು.
ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ವಸತಿ ನಿಲಯ ಪಾಲಕರು, ಅಡುಗೆಯವರು, ಅಡುಗೆ ಸಹಾಯಕರ ತರಬೇತಿ ಕಾರ‌್ಯಕ್ರಮದಲ್ಲಿ ಮಾತನಾಡಿದರು.
ಆಡಳಿತಾತ್ಮಕ ಕೆಲಸ ಎಷ್ಟು ಮುಖ್ಯವೊ, ಹಾಸ್ಟೆಲ್‌ಗಳಲ್ಲಿ ಉತ್ತಮ ವಾತಾವರಣ, ವಿದ್ಯಾರ್ಥಿಗಳ ಸುರಕ್ಷತೆ ಕಡೆ ಗಮನ ಹರಿಸಬೇಕಾದದ್ದು ಕೂಡ ಅಷ್ಟೇ ಮುಖ್ಯ ಕರ್ತವ್ಯ ಎಂಬುದನ್ನು ಮರೆಯಬಾರದು ಎಂದರು.
ಸಂಸ್ಥೆ ಉಪ ಪ್ರಾಚಾರ‌್ಯ ಚಂದ್ರಕುಮಾರ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net