ವಸತಿ ನಿಲಯಗಳ ಸಮಸ್ಯೆ ಪರಿಹರಿಸಿ

bkt-21-4
ಬಾಗಲಕೋಟೆ ನಗರದ ಜಿಲ್ಲಾಡಳಿತ ಭವನ ಎದುರು ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಸಂಘಟನೆ ರಾಜ್ಯ ಸಂಚಾಲಕ ಸತೀಶ ಮಾದರ, ಮಂಜುನಾಥ ಮಾದರ, ಸಂಗಮೇಶ ಚಲವಾದಿ, ಬಾಬು ಮುರನಾಳ, ರಾಮಣ್ಣ ದೊಡ್ಡಮನಿ, ಹಂಪಣ್ಣ ಹಿರೇಮನಿ, ಸಾಬಣ್ಣ ಛಲವಾದಿ ಇತರರು ಇದ್ದರು.
Published on

ಬಾಗಲಕೋಟೆ: ಸಮಾಜ ಕಲ್ಯಾಣ ಇಲಾಖೆಯಲ್ಲಿನ ಹುದ್ದೆಗಳ ವರ್ಗಾವಣೆ ಮಾಡಿದ್ದರು ಸಹ ಕಾನೂನು, ನಿಯಮ ಬಾಹಿರವಾಗಿ ಹುದ್ದೆಯಲ್ಲಿ ಮುಂದುವರೆಸಲಾಗುತ್ತಿದೆ ಎಂದು ಆರೋಪಿಸಿ ಮತ್ತು ವಸತಿ ನಿಲಯಗಳ ಸಮಸ್ಯೆ ಪರಿಹರಿಸಬೇಕು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ಜಿಲ್ಲಾಡಳಿತ ಭವನ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಸಮಿತಿ ಮುಖಂಡರು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಎಂ.ಎಂ.ಮಳಿಮಠ ಅವರು ಮೂಲತಃ ಕಚೇರಿ ಹುದ್ದೆಗೆ ಅಧೀಕರ ಹುದ್ದೆಗೆ ಇದ್ದು, ಪ್ರಸ್ತುತ ಬಾದಾಮಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರು ಗ್ರೇಡ್ ೨ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚಿಕ್ಕ ಬಳ್ಳಾಪುರ ಜಿಲ್ಲೆಗೆ ವರ್ಗಾವಣೆಯಾಗಿದ್ದರು ಸಹ ಅಲ್ಲಿಗೆ ಹೋಗಿಲ್ಲ. ಅಲ್ಲದೆ ವಿವಿಧ ವಸತಿ ನಿಲಯಗಳ ಸರಿಯಾಗಿ ಮೇಲ್ವಿಚಾರಣೆ ಮಾಡದೇ ಬೇಕಾಬಿಟ್ಟಿಯಾಗಿ ಸರ್ಕಾರ ಸಂಪನ್ಮೂಲ ದುರಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಕಾನೂನು, ನಿಯಮ ಬಾಹಿರವಾಗಿ ಹುದ್ದೆಯಲ್ಲಿ ಮುಂದುವರೆದಿದ್ದಾರೆ ಎಂದು ಆರೋಪಿಸಿದರು.

ಅಲ್ಲದೆ ಬಾದಾಮಿ ತಾಲೂಕಿನ ಚಿಕ್ಕಮುಚ್ಚಳಗುಡ್ಡ ಮೊರಾರ್ಜಿ ವಸತಿ ಶಾಲೆಯಲ್ಲಿ ೨೫೦ ವಿದ್ಯಾರ್ಥಿಗಳಿಗೆ ಅವಕಾಶಿದ್ದು, ಪ್ರತ್ಯೇಕ ಕಟ್ಟಡ ಒದಗಿಸದೇ ಸದರಿ ಮೊರಾರ್ಜಿ ವಸತಿ ಶಾಲೆಯಲ್ಲಿ ಹಲವು ವರ್ಷಗಳ ಕಾಲ ನಿಯಮ ಪಾಲನೆ ಮಾಡದೇ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅನಗತ್ಯ ತೊಂದರೆ ನೀಡುತ್ತಿದ್ದಾರೆ. ಕೂಡಲೇ ಎಂ.ಎಂ.ಮಳಿಮಠ ವರ್ಗಾವಣೆ ಮಾಡಬೇಕು. ವಸತಿ ನಿಲಯ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.

ಸಂಘಟನೆ ರಾಜ್ಯ ಸಂಚಾಲಕ ಸತೀಶ ಮಾದರ, ಮಂಜುನಾಥ ಮಾದರ, ಸಂಗಮೇಶ ಚಲವಾದಿ, ಬಾಬು ಮುರನಾಳ, ರಾಮಣ್ಣ ದೊಡ್ಡಮನಿ, ಹಂಪಣ್ಣ ಹಿರೇಮನಿ, ಸಾಬಣ್ಣ ಛಲವಾದಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net