ವಸತಿ ನಿಲಯಕ್ಕೆ ಶಾಸಕ ಮನಗೂಳಿ ಭೇಟಿ

MLA visits hostel
ಸಿಂದಗಿ ಪಟ್ಟಣದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಶಾಸಕ ಎ.ಎಂ. ಮನಗೂಳಿ ಭೇಟಿ ನೀಡಿದರು. ವಸತಿ ನಿಲಯದ ಮೇಲ್ವಿಚಾರಕ ಸತೀಶ ರೆಡ್ಡಿ ಹಾಗೂ ವಿದ್ಯಾರ್ಥಿಗಳಿದ್ದರು.
Published on

ಸಿಂದಗಿ: ಪಟ್ಟಣದ ಕಲಬುರ್ಗಿ ಬೈಪಾಸ್ ಬಳಿಯಲ್ಲಿನ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಶಾಸಕ ಎ.ಎಂ. ಮನಗೂಳಿ ಮಂಗಳವಾರ ದಿಢೀರ್ ಭೇಟಿ ನೀಡಿದರು.

ಈ ವೇಳೆ ವಸತಿ ನಿಲಯದ ಅಡುಗೆ ಮನೆ ವಿದ್ಯಾರ್ಥಿಗಳ ಕೋಣೆ ಸೇರಿದಂತೆ ಅಲ್ಲಿನ ಅಗತ್ಯ ಸೌಲಭ್ಯಗಳನ್ನು ಪರಿಶೀಲಿಸಿ ಮೂಲ ಸೌಕರ್ಯಗಳ ಕೊರತೆಯಿದ್ದರೆ ತಿಳಿಸಿ, ವಿದ್ಯಾರ್ಥಿಗಳ ಶಿಕ್ಷಣ ಮತ್ತು ಆರೋಗ್ಯದ ಕಾಳಜಿ ವಹಿಸುವಂತೆ ಮೇಲ್ವಿಚಾರಕ ಸತೀಶ ರೆಡ್ಡಿ ಅವರಿಗೆ ಸೂಚಿಸಿದರು.

ವಸತಿ ನಿಲಯದ ಮೇಲ್ವಿಚಾರಕ ರೆಡ್ಡಿ ಮಾತನಾಡಿ, 75 ವಿದ್ಯಾರ್ಥಿಗಳಿಗೆ ವಸತಿ ಒದಗಿಸಲು ಅವಕಾಶವಿದ್ದು ಅವರಲ್ಲಿ ಸದ್ಯ 52 ವಿದ್ಯಾರ್ಥಿಗಳಿದ್ದಾರೆ. ಮುಂದಿನ ಹಂತದಲ್ಲಿ ವಸತಿ ವಿದ್ಯಾರ್ಥಿಗಳ ಪಟ್ಟಿಯಂತೆ ಆಯ್ಕೆ ಮಾಡಲಾಗುವುದು. ವಸತಿ ನಿಲಯದಲ್ಲಿ 25 ಬೆಡ್‌ಗಳ ಕೊರತೆಯ ಜತೆಗೆ ಇತರ ಮೂಲ ಸೌಕರ್ಯಗಳ ಬೇಡಿಕೆಗಾಗಿ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಸಿಬ್ಬಂದಿ ಕೊರತೆಯಿರುವುದಿಲ್ಲ ಎಂದು ತಿಳಿಸಿದರು.

ಈ ವೇಳೆ ವಸತಿ ನಿಲಯದಲ್ಲಿ ಅಡುಗೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net