ವಸತಿ ನಿಲಯಕ್ಕೆ 2.20ಕೋಟಿ ರೂ. ಮಂಜೂರು

11-SHIGLI-1b
Published on

ಶಿಗ್ಲಿ: ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಸರ್ಕಾರ ವಸತಿ ನಿಲಯಗಳನ್ನು ನಿರ್ವಿುಸುತ್ತಿದೆ. ನಿಲಯದ ಸೌಲಭ್ಯ ಸದುಪಯೋಗ ಪಡೆದು ಕಲಿತ ಶಾಲೆಗೆ ಕೀರ್ತಿ ತರಬೇಕು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

ಗ್ರಾಮದ ವಾರ್ಡ್ ನಂ. 3ರಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ವಸತಿ ನಿಲಯ ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ವಸತಿ ನಿಲಯ ನಿರ್ವಣಕ್ಕಾಗಿ 2.20 ಕೋಟಿ ರೂ. ಮಂಜೂರಾಗಿದೆ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಡಿ.ವೈ. ಹುನುಗುಂದ, ಗ್ರಾಮದ ಆರ್.ಎನ್. ತೆಲ್ಕರ್ ಮಾತನಾಡಿದರು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ರತ್ನಮ್ಮ ಹೊಸಮನಿ, ತಾಲೂಕು ಅಧಿಕಾರಿ ಕೆ.ಎಸ್. ಕಲ್ಮಠ, ಪಿಡಿಒ ಬಿ.ಟಿ. ಅಮ್ಮನವರ, ಬಸವರಾಜ ಅಂಜಿ, ಈರಣ್ಣ ಅಕ್ಕೂರ, ಕೃಷ್ಣ ಬಿದರಹಳ್ಳಿ, ಬಸಣ್ಣ ಕಳಸದ, ಪುಲಕೇಶಿ ಉಪನಾಳ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net