ವಸತಿ ನಿಲಯ ನೂತನ ಅದೇಶ ರದ್ದತಿಗೆ ಎಐಯುಟಿಯುಸಿ ಆಗ್ರಹ

PH 03
Published on

ಶಹಾಬಾದ್: ಕಲಬುರಗಿ ಜಿಲ್ಲೆಯ ಎಲ್ಲ ವಸತಿ ನಿಲಯ ಕಾರ್ಮಿಕರಿಗಾಗಿ ಜಾರಿಗೆ ತಂದಿರುವ ನೂತನ ಆದೇಶವನ್ನು ರದ್ದು ಮಾಡಿ, ಪ್ರತಿ 50 ವಿದ್ಯಾರ್ಥಿಗಳಿಗೆ 3 ಜನ ಕಾರ್ಮಿಕರನ್ನು ನೇಮಿಸಬೇಕು ಎಂದು ಒತ್ತಾಯಿಸಿ ಕಲಬುರಗಿಯಲ್ಲಿ ಎಐಯುಟಿಯುಸಿ ವತಿಯಿಂದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ಧೇಶಕರಿಗೆ ಹಾಗೂ ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಶನಿವಾರ ಮನವಿಪತ್ರ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಎಂ.ಜಿ., ಕಾರ್ಯದರ್ಶಿ ಶರಣು ಹೇರೂರ ಮಾತನಾಡಿ, ವಸತಿ ನಿಲಯ ಕಾರ್ಮಿಕರ ಬಾಕಿ ವೇತನ, ಕ್ವಾರಂಟೈನ್​ ವೇತನ, ವಾರದ ರಜೆ, ಕನಿಷ್ಠ ವೇತನ ಸೇರಿ ಇತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಸಂಘದ ಸದಸ್ಯರಾದ ಸಂತೋಷ ದೊಡ್ಡಮನಿ, ಶರಣು ಸಣಗುಂಡಿ, ಸದಾನಂದ ಧನ್ನೇಕರ, ಗುರುನಾಥ ಕೊರವಾರ, ಪ್ರೇಮಜ್ಯೋತಿ ದೊಡ್ಡಮನಿ, ಚಂದ್ರು ಕಟ್ಟಿಮನಿ, ಆಕಾಶ ಸಿಂಧೆ, ರವಿಕುಮಾರ ನಾಲವಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net