ವಶಕ್ಕೆ ಪಡೆದಿದ್ದ ಮದ್ಯ, ಕಳ್ಳಬಟ್ಟಿ ಸಾರಾಯಿ ನಾಶ

25blrp2.
Published on

ಬೇಲೂರು: ಪಟ್ಟಣದ ಅಬಕಾರಿ ಕಚೇರಿ ಆವರಣದಲ್ಲಿ ಆರೋಪಿಗಳಿಂದ ವಶಕ್ಕೆ ಪಡೆದಿದ್ದ ಮದ್ಯ ಹಾಗೂ ಕಳ್ಳಬಟ್ಟಿ ಸಾರಾಯಿ ಮತ್ತು ಬೆಲ್ಲದ ಕೊಳೆಯನ್ನು ಅಧಿಕಾರಿಗಳು ನಾಶ ಪಡಿಸಿಕೊಂಡರು.

ಬಳಿಕ ಮಾತನಾಡಿದ ಹಾಸನ ಉಪ ವಿಭಾಗದ ಅಬಕಾರಿ ಉಪಾಧೀಕ್ಷಕ ಎಂ.ಎಚ್. ರಘು, 2019-20ನೇ ಸಾಲಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ, ಕಳ್ಳಬಟ್ಟಿ ಸಾರಾಯಿ ತಯಾರಿಸಿ ಮಾರಾಟದಲ್ಲಿ ಭಾಗಿಯಾಗಿದ್ದ 65 ಪ್ರಕರಣಗಳಲ್ಲಿ 23 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. 1.15 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ಹಾಗೂ ಕಳ್ಳಬಟ್ಟಿ ಮತ್ತು ಕೊಳೆಯನ್ನು ನಾಶ ಪಡಿಸುತಿದ್ದೇವೆ ಎಂದು ತಿಳಿಸಿದರು.

ಅಬಕಾರಿ ನಿರೀಕ್ಷಕ ಕೇಶವಮೂರ್ತಿ ಮಾತನಾಡಿದರು. ತಹಸೀಲ್ದಾರ್ ಎನ್.ವಿ. ನಟೇಶ್, ತಾಪಂ ಇಒ ರವಿಕುಮಾರ್, ಅಬಕಾರಿ ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net