ವಿವಿಧ ಕ್ರೀಡೆಯಲ್ಲಿ ವಿದ್ಯಾರ್ಥಿಗಳ ಸಾಧನೆ

Zonal Sports Festival
ಕೂಡಲಸಂಗಮ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಕಬ್ಬಡಿ ಆಟದಲ್ಲಿ ತೊಡಗಿರುವುದು.
Published on

ಕೂಡಲಸಂಗಮ: ಸ್ಥಳೀಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವಲಯಮಟ್ಟದ ಕ್ರೀಡಾಕೂಟದಲ್ಲಿ ಕೂಡಲಸಂಗಮ ಸರ್ಕಾರಿ ಪ್ರೌಢಶಾಲೆಯ ಪುರುಷರ ವಿಭಾಗದಲ್ಲಿ ಮಲ್ಲಪ್ಪ ಮರಿಗೌಡರ ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ, ಭಲ್ಲೆ ಎಸೆತದಲ್ಲಿ ದ್ವಿತೀಯ, ಸೈಯ್ಯದ್ ಪಿಂಜಾರ 200 ಮೀ. ಓಟದಲ್ಲಿ ಪ್ರಥಮ, ದುರ್ಗೇಶ ವಡ್ಡರ 100 ಮೀ. ಓಟದಲ್ಲಿ ತೃತೀಯ, ಶ್ರವಣಕುಮಾರ ತಳವಾರ ಹರ್ಡಲ್ಸ್ ಸ್ಪರ್ಧೆಯಲ್ಲಿ ಪ್ರಥಮ, ಪುರುಷರ ಕಬಡ್ಡಿ, ರಿಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ತನುಜಾ ಮನಹಳ್ಳಿ ಹರ್ಡಲ್ಸ್ ಸ್ಪರ್ಧೆಯಲ್ಲಿ ಪ್ರಥಮ, ಸೃಷ್ಟಿ ಹಳದವರ ದ್ವಿತೀಯ, ಕಾವೇರಿ ಕದರಮುಂಡಗಿ ಎತ್ತರ ಜಿಗಿತದಲ್ಲಿ ಪ್ರಥಮ, ಪ್ರೀತಿ ಗೌಡರ ಚಕ್ರ ಎಸೆತ ಪ್ರಥಮ, ಗುಂಡು ಎಸೆತದಲ್ಲಿ ದ್ವಿತೀಯ, ಅಕ್ಷತಾ ನಾಯ್ಕೋಡಿ ಎತ್ತರ ಜಿಗಿತದಲ್ಲಿ ತೃತೀಯ, ದೀಪಾ ಮೂಲಿಮನಿ 1500 ಮೀ. ಓಟದಲ್ಲಿ ತೃತೀಯ, ವಿಜಯಲಕ್ಷ್ಮೀ ವಾಲಿಕಾರ 3000 ಮೀ. ಓಟದಲ್ಲಿ ತೃತೀಯ ಸ್ಥಾನ ಹಾಗೂ ಮಹಿಳೆಯರ ವಾಲಿಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ದೈಹಿಕ ಶಿಕ್ಷಕ ಗುರುರಾಜ ಗಿರಿಜಾ, ಮುಖ್ಯಶಿಕ್ಷಕ ಸಿ.ಎಸ್. ಚಟ್ಟೇರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net