

ಚಿಕ್ಕಮಗಳೂರು: ಜೆಸಿಐ ಭಾರತ ವಲಯ ೧೪ರ ಅಧ್ಯಕ್ಷರಾಗಿ ಚಿಕ್ಕಮಗಳೂರಿನ ವಿಜಯಕುಮಾರ್ ಆಯ್ಕೆಯಾಗಿದ್ದು ಮಲೆನಾಡಿಗೆ ಹೊಸ ಗರಿಮೆ ತಂದಿದ್ದಾರೆ.
ಮೈಸೂರಿನಲ್ಲಿ ನಡೆದ ವಿಜೃಂಭಣೆಯ ವಲಯ ಸಮ್ಮೇಳನದಲ್ಲಿ ಜೆ ಸಿ ಐ ಚಿಕ್ಕಮಗಳೂರು ಮಲ್ನಾಡ್ ಘಟಕದಿಂದ ಪ್ರಪ್ರಥಮ ಬಾರಿಗೆ ವಲಯ ಅಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಿದ್ದ ವಿಜಯ್ ಕುಮಾರ್ ೨೦೨೫ ನೇ ಸಾಲಿನ ವಲಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
೨೦೧೩ರಲ್ಲಿ ಚಿಕ್ಕಮಗಳೂರು ಜೆಸಿಐಗೆ ಸೇರ್ಪಡೆಯಾಗಿದ್ದು, ೨೦೨೦ರಲ್ಲಿ ಚಿಕ್ಕಮಗಳೂರು ಘಟಕದ ಅಧ್ಯಕ್ಷರಾಗಿ ೨೦೨೧ ವಲಯ ಉಪಾಧ್ಯಕ್ಷರಾಗಿ ೨೦೨೨ರಲ್ಲಿ ವಲಯ ಕಾರ್ಯದರ್ಶಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದ ಅನುಭವ ಅಲ್ಲಿನ ಕಾರ್ಯವೈಖರಿ ವಲಯ ಅಧ್ಯಕ್ಷರಾಗಿ ಆಯ್ಕೆಯಾಗುವ ಮಟ್ಟಕ್ಕೆ ಕರೆದೊಯ್ದಿದೆ.
ದೇಸಿ ೧೪ರ ವಲಯ ಅಧ್ಯಕ್ಷರಾದ ಆಶಾ ಜೈನ್ ಅವರಿಂದ ಅಧಿಕಾರ ಸ್ವೀಕರಿಸಿದ ವಿಜಯಕುಮಾರ್ ಅವರು ಸದಸ್ಯನಿಂದ ವಲಯ ಅಧ್ಯಕ್ಷರವರೆಗೂ ಕೈಹಿಡಿದೆ. ಕೈಹಿಡಿದು ನಡೆಸಿದ ತಂಡದ ಸದಸ್ಯರು ಹಾಗೂ ಆಯ್ಕೆಗೆ ಸಹಕರಿಸಿದ ವಲಯ ಪೂರ್ವ ಅಧ್ಯಕ್ಷರು ಹಾಗೂ ಹಿರಿಯರನ್ನು ನೆನೆದು ಧನ್ಯವಾದ ಸಲ್ಲಿಸಿದರು.
ಚುನಾವಣ ಅಧಿಕಾರಿಯಾಗಿ ಜೆಸಿ ಸರವಣ, ನಾಮಪತ್ರ ಕಮಿಟಿಯ ಅಧ್ಯಕ್ಷ ಯಶಸ್ವಿನಿ, ಸದಸ್ಯರಾದ ಸಮತ, ಜೆ ಸಿ ಭರತ್, ಜೆಸಿ ಕುನಾಲ್ ಚುನಾವಣಾ ಕಾರ್ಯ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಜೆಸಿಐ ಭಾರತದ ರಾಷ್ಟಿçÃಯ ಪೂರ್ವ ನಿರ್ದೇಶಕರಾದ ಜೆಸಿ ದೇವರಾಜ್, ಪ್ರಮುಖರಾದ ಭರತ್ ಆಚಾರ್ಯ, ವಿಕಾಸ್ ಗೂಗ್ಲಿಯ, ಐಎಫ್‌ಎಸ್ ಕುಮಾರ್, ನರೇನ್ ಕಾರ್ಯಪ್ಪ ಮತ್ತಿತರರಿದ್ದರು.