

ಕೊಡೇಕಲ್: ಕೊಡೇಕಲ್ ಹೋಬಳಿ ವಲಯದಲ್ಲಿ ೮ ಡೆಂಘೆ ಪ್ರಕರಣಗಳು ಪತ್ತೆಯಾದ ಘಟನೆ ಮಂಗಳವಾರ ಬೆಳಕಿಗೆ ಬಂದಿದ್ದು, ಇದರಿಂದ ಜನರಲ್ಲಿ ಭೀತಿ ಹುಟ್ಟಿದೆ.
ಸಮೀಪದ ಬರದೇವನಾಳ ಗ್ರಾಪಂ ವ್ಯಾಪ್ತಿಗೆ ಬರುವ ಆರ್.ಕೆ,ನಗರ ತಾಂಡಾದಲ್ಲಿ-೩, ಕೊಡೇಕಲ್-೨, ಹಗರಟಗಿ ಗ್ರಾಪಂನ ಬಪ್ಪರಗಿ-೧ ಮತ್ತು ಮಾರನಾಳ ಗ್ರಾಪಂನ ಮಾರನಾಳ ತಾಂಡಾದಲ್ಲಿ-೧ ಡೆಂಘೆ ಪತ್ತೆಯಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಕರೋನಾದಿಂದ ಆತಂಕಗೊAಡಿದ್ದ ಗ್ರಾಮೀಣ ಭಾಗದ ಜನರಿಗೆ ಇದೀಗ ಡೆಂಘೆ ಜ್ವರ ಕಾಣಿಸಿಕೊಂಡಿರುವುದರಿAದ ಜನರ ನಿದ್ದೆಗೆಡಿಸಿದ್ದು, ಇದರಿಂದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ವಲಯದ ಬಹುತೇಕ ಗ್ರಾಮಗಳಲ್ಲಿ ಸ್ವಚ್ಛತೆ ಮರಿಚಿಕೆಯಾಗಿದ್ದು, ಒಂದೆಡೆಯಾದರೆ ಇನ್ನೂ ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸ್ವಚ್ಛತೆ ಕಾಣದ ಚರಂಡಿಗಳು ಸೊಳ್ಳೆಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದ್ದು, ಅಲ್ಲದೆ ತಗ್ಗು ಪ್ರದೇಶಗಳಲ್ಲಿ ಸಂಗ್ರಹಗೊAಡಿರುವ ಮಳೆ ನೀರು ಕೂಡ ಡೆಂಘೆ ಮತ್ತು ಮಲೇರಿಯಾ ಹರಡಲು ಪೂರಕವಾದ ವಾತಾವರಣ ಸೃಷ್ಟಿಯಾಗಿದೆ. ಗ್ರಾಪಂನವರು ಸ್ವಚ್ಛತೆ ಮಾಡದ ಕಾರಣ ಡೆಂಘೆ ಹರಡಲು ಮೂಲ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಡೆಂಘೆ ಪ್ರಕರಣ ಹೊರಬೀಳುತ್ತಿದ್ದಂತೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಮಿಂಚಿನ ಸಂಚಾರ ಮಾಡುವ ಮೂಲಕ ಮನೆ ಮನೆಗೆ ಭೇಟಿ ನೀಡಿ ಲಾರ್ವಾ ಸರ್ವೇ ಕರ‍್ಯಕ್ಕೆ ಚಾಲನೆ ನೀಡಿದೆ. ಜ್ವರದಿಂದ ಬಳಲುತ್ತಿದ್ದ ಜನರು ಕೊಡೇಕಲ್ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದು ರಕ್ತ ತಪಾಸಣೆ ಮಾಡಿದ ನಂತರ ದೃಢಪಟ್ಟಿದೆ. ಇದರಿಂದ ಆರೋಗ್ಯ ಇಲಾಖೆ ಜಾಗೃತಗೊಂಡಿದೆ.
ಸಾರ್ವಜನಿಕರು ಕಡ್ಡಾಯವಾಗಿ ನೀರು ಕಾಯಿಸಿ ಆರಿಸಿ ಕುಡಿಯಬೇಕು. ಮನೆಯಲ್ಲಿ ಸ್ವಚ್ಛತೆ ಕಾಪಾಡಬೇಕು. ಶೇಖರಣೆ ಮಾಡುವ ಟ್ಯಾಂಕ್ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಜಯಾ ಪವ್ಹಾರ್, ನರಸಿಂಹ ನಾಯಕ, ಆಕಾಶ ಕಾಂಬ್ಳೆ, ರಾಮಚಂದ್ರ, ಶರಣು ನೇತೃತ್ವದ ತಂಡ ಜನರಲ್ಲಿ ತಿಳುವಳಿಕೆ ಮೂಡಿಸುತ್ತಿದೆ.