

ಕಲಬುರಗಿ: ವಲಯ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಹಡಗಿಲ್ ಹಾರತಿ ಗ್ರಾಮದ ಪ್ರೌಢಶಾಲೆ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ಸಾಧನೆ ಮೆರೆದಿದ್ದಾರೆ.
400 ಮೀ. ಓಟದಲ್ಲಿ ಗೌರಮ್ಮ ನೀಲಪ್ಪ ಪ್ರಥಮ, 800 ಮೀ. ಓಟದಲ್ಲಿ ಗುಂಡಮ್ಮ ಪೂಜಾರಿ ಪ್ರಥಮ, ತ್ರಿವಿಧ ಜಿಗಿತದಲ್ಲಿ ಪ್ರಥಮ ಸ್ಥಾನ, ಜಾವಲಿನ್ ಎಸೆತದಲ್ಲಿ ತೃತೀಯ ಸ್ಥಾನ, ಲಕ್ಷ್ಮೀ ಶಿವಲಿಂಗಪ್ಪ ತ್ರಿವಿಧ ಜಿಗಿತ ದ್ವಿತೀಯ, 800 ಮೀ. ಓಟದಲ್ಲಿ ನಾಗಮ್ಮ ಹಣಮಂತ ತೃತೀಯ, 3000 ಮೀ. ಓಟದಲ್ಲಿ ಕಾವೇರಿ ರಾಠೋಡ್ ದ್ವಿತೀಯ ಸ್ಥಾನ, ಬಾಲಕರ ವಿಭಾಗದಲ್ಲಿ ಮಲ್ಲಿಕಾರ್ಜುನ ನೀಲಕಂಠಪ್ಪ ತ್ರಿವಿಧ ಜಿಗಿತ ಪ್ರಥಮ ಸ್ಥಾನ, ಆದಿತ್ಯ ಸುಭಾಷ್ ತೃತೀಯ ಸ್ಥಾನ, ಸ್ವಸ್ತಿಕ್ ಬಿರಾದಾರ್ ಗುಂಡು ಎಸೆತ ಪ್ರಥಮ ಸ್ಥಾನ, ಚಕ್ರ ಎಸೆತ ದ್ವಿತೀಯ ಸ್ಥಾನ, 3000 ಮೀ. ಓಟದಲ್ಲಿ ಗಣೇಶ್ ತಳವಾರ್ ತೃತೀಯಾ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಾಧನೆಗೆ ಶಾಲೆಯ ಮುಖ್ಯಗುರುಗಳು, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀದೇವಿ ರಾಜಶೇಖರ್ ಕಟ್ಟಿಮನಿ, ಎಸ್ ಡಿಎಮ್ ಸಿ ಅಧ್ಯಕ್ಷರು ಹಾಗೂ ಸದಸ್ಯರು ಹರ್ಷ ವ್ಯಕ್ತ ಪಡಿಸಿದ್ದಾರೆ.