ವರ್ಷಧಾರೆಗೆ ಕುಸಿದ ಮನೆಗಳು

22mnd1
Published on

ಮುಂಡಗೋಡ: ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣದ ಹಾಗೂ ಗ್ರಾಮೀಣ ಭಾಗದಲ್ಲಿ ಮನೆಗಳಿಗೆ ಹಾನಿಯಾಗಿದೆ. ಪಟ್ಟಣದ ಆಜಾದ ನಗರದ ಶಾಹಿನಾ ಎಂಬುವರ ಮನೆಯ ಗೋಡೆ ಕುಸಿದು ಬಿದ್ದು ಹಾನಿಯಾಗಿದೆ. ಇದಲ್ಲದೆ ತಾಲೂಕಿನ ಕಾತೂರ ಗ್ರಾಮದ ರತ್ನಾಬಾಯಿ ಬಡಿಗೇರ, ಕಲಕೊಪ್ಪ ಗ್ರಾಮದ ರಮೇಶ ಗುಬ್ಬಕ್ಕನವರ, ಸಾಲಗಾಂವ್​ನ ಶಿವಾನಂದ ಚಕ್ರಸಾಲಿ, ಅಗಡಿಯ ಅಂಬವ್ವಾ ಲಮಾಣಿ, ಎರೇಬೈಲ್ ಗ್ರಾಮದ ನಾಗರಾಜ ಜಡೆಗೊಂಡ ಎಂಬುವರ ಮನೆಗಳ ಗೋಡೆ ಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net