

ನಿಪ್ಪಾಣಿ: ಒಂದು ವರ್ಷದ ಒಳಗಾಗಿ ನಗರದಲ್ಲಿ ಮಹಾನ್ ಸಾಹಿತಿ ಅಣ್ಣಾಭಾವು ಸಾಠೆ ಪುತ್ಥಳಿ ಪ್ರತಿಷ್ಠಾಪಿಸಲಾಗುವುದು ಎಂದು ದಲಿತ ಕ್ರಾಂತಿ ಸೇನಾ ಅಧ್ಯಕ್ಷ ಅಶೋಕ ಕುಮಾರ ಅಸೋದೆ ಹೇಳಿದರು.
ಇಲ್ಲಿನ ಜತ್ರಾಟ್ ವೇಸ್‌ನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಣ್ಣಾಭಾವು ಸಾಠೆಯವರ 102ನೇ ಜಯಂತಿಯಲ್ಲಿ ಮಾತನಾಡಿದ ಅವರು, ತಮ್ಮ ಕಥೆ, ಕಾದಂಬರಿ ಮೂಲಕ ದಲಿತ, ಶೋಷಿತ, ಹಿಂದುಳಿದ ಸಮಾಜ ಜಾಗೃತಿ ಮಾಡುವ ಕಾರ್ಯ ಮಾಡಿದ ಸಾಠೆ ಅವರು ಡಾ.ಅಂಬೇಡ್ಕರ್ ಅನುಯಾಯಿಯಾಗಿದ್ದರು ಎಂದು ತಿಳಿಸಿದರು.
ಸಾಠೆ ಅವರ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು. ಸಾಮಾಜಿಕ ಕಾರ್ಯಕರ್ತ ರತನ ಪೋಳ ಡಾ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಅಣ್ಣಾಭಾವು ಸಾಠೆ ವಿಚಾರ ಮಂಚ್‌ನ ಅಧ್ಯಕ್ಷ ಸಚಿನ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿದರು. ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಒಂದೇ ದಿನದಲ್ಲಿ ರೂ. ಒಂದು ಲಕ್ಷ ಸಂಗ್ರಹವಾಯಿತು.
ಶೇತ್ಕರಿ ಸಂಘಟನೆಯ ಮುಖಂಡ ರಾಜು ಪವಾರ, ರವೀಂದ್ರ ಶ್ರೀಖಂಡೆ, ರತನ ಪೋಳ, ಮೋಹನ ಘಸ್ತೆ ಮಾತನಾಡಿದರು. ನಗರಸಭೆ ಸದಸ್ಯ ದತ್ತಾ ನಾಯಿಕ, ಸದಸ್ಯೆ ಅನಿತಾ ಪಠಾಡೆ, ಆನಂದ ಕೆಂಗಾರೆ, ಜಗದೀಶ ಹೆಗಡೆ, ದಿಲೀಪ ಪಠಾಡೆ, ರವಿ ಕದಂ, ಸರ್ಜೇರಾವ ಹೆಗಡೆ,
ಅಶೋಕ ಲಾಖೆ, ಕಿಸನ ದಾವನೆ, ರಮೇಶ ಸಕಟ, ಪ್ರಕಾಶ ಹೆಗಡೆ, ಉದಯ ಹೆಗಡೆ, ಅಜೀತ ಪೋಳ, ಹರೀಶ ಸನದಿ, ಸುನೀಲ ಕಾಂಬಳೆ ಇತರರು ಇದ್ದರು.