ವರ್ಷಕ್ಕೊಂದಾದರೂ ಗಿಡ ನೆಡಿ

mysore
Published on

ಮೈಸೂರು: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬುಡಕಟ್ಟು ಜನರನ್ನು ಅಭಿವೃದ್ಧಿ ಜತೆಗೆ ಕಾಡನ್ನು ಸಂರಕ್ಷಿಸುತ್ತಿರುವುದು ವಿಶೇಷವಾಗಿದೆ ಎಂದು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ ಟಿ.ಯೋಗೀಶ್ ಹೇಳಿದರು.

ದಟ್ಟಗಳ್ಳಿಯ ನ್ಯಾಯಾಂಗ ಬಡಾವಣೆಯಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರೂ ಪ್ರತಿ ವರ್ಷ ಒಂದು ಗಿಡವನ್ನಾದರೂ ನೆಡಬೇಕು. ರಾಜ್ಯದಲ್ಲಿ ಶೇ.21 ಮಾತ್ರ ಅರಣ್ಯ ಪ್ರದೇಶವಿದೆ.

ಹೆಚ್ಚಿನ ಪ್ರಮಾಣದಲ್ಲಿ ಮರಗಿಡಗಳನ್ನು ನೆಡುವ ಮುಖಾಂತರ ಪರಿಸರ ಸಂರಕ್ಷಿಸಬೇಕಿದೆ. ಕಾಡು ಹೆಚ್ಚಾಗಿದ್ದಾರೆ ಪ್ರಾಣಿ ಸಂಕುಲ ಹೆಚ್ಚಾಗಿರುತ್ತವೆ. ಮಳೆ ಚೆನ್ನಾಗಿ ಬಂದು ರೈತರು ಸಹ ನೆಮ್ಮದಿಯಾಗಿರುತ್ತಾರೆ. ಪರಿಸರ ಸಂರಕ್ಷಣೆಗೆ ಸಂಘ-ಸಂಸ್ಥೆಗಳು, ಸರ್ಕಾರ, ಮಠಗಳು ಇತ್ತೀಚೆಗೆ ಹೆಚ್ಚು ಒತ್ತು ನೀಡುತ್ತಿರುವುದು ಸಂತೋಷ ಎಂದರು.

ಸಂಸ್ಥೆಯ ಉಪನಿರ್ದೇಶಕಿ ಬಿ.ಎಸ್.ಪ್ರಭಾ ಅರಸ್, ಸಂಶೋಧನಾಕಾರಿ ಕೆ.ಶ್ರೀನಿವಾಸ್, ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಶಿವಕುಮಾರ್, ಡಾ.ಮೋಹನ್‌ಕುಮಾರ್, ಡಾ.ಮಂಜುನಾಥ್, ರವಿಕುಮಾರ್, ಕೃಷ್ಣಮೂರ್ತಿ, ಲೆಕ್ಕ ಪರಿಶೋಧನಾಕಾರಿ ಬಿ.ಆರ್.ಭವ್ಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net