

ಯಾದಗಿರಿ: ವರ್ತಕರ ಆಥರ್ಿಕ ಪ್ರಗತಿಯಿಂದಲೇ ದೇಶದ ಪ್ರತಿಯೊಂದು ಕ್ಷೇತ್ರಗಳು ಪ್ರಗತಿ ಹೊಂದಲು ಸಾಧ್ಯ ಎಂದು ಖ್ಯಾತ ಆಥರ್ಿಕ ತಜ್ಞ ವಿಶ್ವನಾಥ ಭಟ್ ಅಭಿಪ್ರಾಯಪಟ್ಟರು.
ಭಾನುವಾರ ನಗರದ ವಿದ್ಯಾಮಂಗಲ ಕಾಯರ್ಾಲಯದಲ್ಲಿ ಜಿಲ್ಲಾ ಬಿಜೆಪಿಯಿಂದ ಆಯೋಜಿಸಿದ್ದ ಭಾರತ ಅರ್ಥ ವ್ಯವಸ್ಥೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ವರ್ತಕರ ಹಾಗೂ ದೇಶದ ಪ್ರಗತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಾಗಂತ ಅವರ ಮೇಲೆ ಅತೀಯಾದ ತೆರಿಗೆಯನ್ನು ಹೇರಬಾರದು. ಒಂದು ಕಾಲಕ್ಕೆ ತೆರಿಗೆ ಕಟ್ಟುವಲ್ಲಿ 141 ಸ್ಥಾನದಲ್ಲಿದ್ದ ಭಾರತ ಇಂದು 63 ಸ್ಥಾನಕ್ಕೆ ಬಂದಿದೆ. ಕೇಂದ್ರದಲ್ಲಿನ ಬಿಜೆಪಿ ಸಕರ್ಾರ ವರ್ತಕರಿಗೆ ಹೊರೆಯಾಗುತ್ತಿದ್ದ 2 ಸಾವಿರ ನಿಯಮಗಳನ್ನು ತೆಗೆದು ಹಾಕುವ ಮೂಲಕ ಐಟಿ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನು ಮಾಡಿದೆ ಎಂದು ವಿವರಿಸಿದರು.
ಸತತ 5 ದಶಕಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಸಮಾಜವಾದದ ಸೋಗಿನಲ್ಲಿ ಸಮಾಜಕ್ಕೆ ಬಡತವನ್ನು ಬಳುವಳಿಯಾಗಿ ನೀಡಿತ್ತು. ಕಪ್ಪು ಬಂಗಾರ ಎಂದೇ ಕರೆಯುವ 203 ಕಲ್ಲಿದ್ದಲು ಗಣಿಗಳನ್ನು ಸಿಕ್ಕಸಿಕ್ಕವರಿಗೆ ಹರಾಜು ಹಾಕಿದ್ದರು. ಆದರೆ 2014ರಲ್ಲಿ ಅರುಣ ಜೇಟ್ಲಿ ದೇಶದ ವಿತ್ತ ಮಂತ್ರಿಗಳಾದ ಮೇಲೆ 65 ಕಲ್ಲಿದ್ದಲಿನ ಗಣಿಗಳನ್ನು ಹರಾಜು ಹಾಕಿದ್ದರು. ಇದರಿಂದ ಬಂದ ಲಾಭ ಬರೋಬ್ಬರಿ 3.24 ಲಕ್ಷ ಸಾವಿರ ಕೋಟಿ ರೂ. ಈ ಹಣ ಕೇಂದ್ರ ಸಕರ್ಾರಕ್ಕೆ ಹೋಗಲ್ಲ. ಕಲ್ಲಿದ್ದಲು ಗಣಿ ಇರುವ ರಾಜ್ಯಗಳಿಗೆ ಸಿಗುತ್ತದೆ ಎಂದರು.
65 ಗಣಿಗಳಿಗೆ 3 ಲಕ್ಷ ಸಾವಿರ ಕೋಟಿ ಎಂದರೆ, 203 ಗಣಿಗಳಿಗೆ ಕನಿಷ್ಠ 10 ಲಕ್ಷ ಸಾವಿರ ಕೋಟಿ ಆಯ್ತು. ಹಾಗಾದರೆ ಈ ಹಣ ಎಲ್ಲಿಗೆ ಹೋಯಿತು ಎಂಬುದೇ ಗೊತ್ತಾಗುತ್ತಿರಲಿಲ್ಲ. ನರೇಂದ್ರ ಮೋದಿ ಪ್ರಧಾನ ಮಂತ್ರಿಗಳಾದ ತಕ್ಷಣ ಈ ರೀತಿ ಸೋರಿಕೆಯಾಗುತ್ತಿದ್ದ ಹಣವನ್ನೆಲ್ಲ ಕ್ರೋಢಿಕರಿಸುವ ಮೂಲಕ ಮೇಕ್ ಇನ್ ಇಂಡಿಯಾ ಯೋಜನೆ ಜಾರಿಗೆ ತಂದರು. ಕರೋನಾ ಹೆಮ್ಮರಿಯ ಕಾಲದಲ್ಲಿ ಭಾರತದ ಆಥರ್ಿಕತೆ ತಳಕಚ್ಚಿದೆ ಎಂದು ಭಾವಿಸಿದ್ದ ಅನೇಕ ರಾಷ್ಟ್ರಗಳು ಇಂದು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದು ಸಹ ನಮ್ಮ ಪ್ರಧಾನಿಗಳು ಎಂದು ತಿಳಿಸಿದರು.
ಆತ್ಮ ನಿರ್ಭರ ಭಾರತ ಯೋಜನೆ ಮೂಲಕ ಹೆಮ್ಮಾರಿ ಕೋವಿಡ್ಗೆ ದೇಶಿಯ ಲಸಿಕೆ ಲಸಿಕೆ ಕಂಡು ಹಿಡಿಯಲು ನಮ್ಮ ವಿಜ್ಞಾನಿಗಳಿಗೆ ಪ್ರೋತ್ಸಾಹ ತುಂಬಿದ ಮೋದಿ, ಹೊರ ದೇಶದಿಂದ ಲಸಿಕೆ ತರಿಸಲು ಖಚಾಗುತ್ತಿದ್ದ ಲಕ್ಷಾಂತರ ಕೋಟಿ ರೂ.ಹಣ ಮತ್ತು ಲಕ್ಷಾಂತರ ಜನರ ಪ್ರಾಣ ಉಳಿಸಿದ್ದಾರೆ. ದೇಶದ ಜನತೆಗೆ ಉಚಿತವಾಗಿ ಲಸಿಕೆ ಕೊಡಲಾಯಿತು. ಆದರೆ, ಈ ಹಂತದಲ್ಲೂ ಕಾಂಗ್ರೆಸ್ ಲಸಿಕೆಯ ಬಗ್ಗೆ ಅಪಪ್ರಚಾರ ಮಾಡಿತು ಎಂದು ಆರೋಪಿಸಿದರು.
ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ನಾಯ್ಕಲ್ ಪ್ರಾಸ್ತಾವಿಕ ಮಾತನಾಡಿದರು. ಲಲಿತಾ ಅನಪುರ, ಬಾಬು ದೋಖಾ ಇದ್ದರು. ವೆಂಕಟರಡ್ಡಿ ಅಬ್ಬೆತುಮಕೂರು ನಿರೂಪಿಸಿ, ವಂದಿಸಿದರು.