ವರ್ಣರಂಜಿತ ರಂಗೋಲಿ ಚಿತ್ತಾರ

13KDR3 WEB
Published on

ಕಡೂರು: ಹರ್ ಘರ್ ತಿರಂಗಾ ಅಭಿಯಾನದಡಿ ಪುರಸಭೆ ಮಹಿಳಾ ಸದಸ್ಯರು ಶನಿವಾರ ಕಚೇರಿ ಆವರಣದಲ್ಲಿ ವಿಶೇಷ ವರ್ಣರಂಜಿತ ರಂಗೋಲಿಗಳನ್ನು ಬಿಡಿಸಿದರು. ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಆ.11ರಿಂದ 5 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪುರಸಭೆ ಸದಸ್ಯರ ಬೈಕ್ ರ್ಯಾಲಿ, ನಿವೇದಿತಾ ಶಾಲೆಯ ವಿಶೇಷ ಅಂಗವಿಕಲ ಮಕ್ಕಳಿಂದ ಪುರಸಭೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಂಗೋಲಿ ಸ್ಪರ್ಧೆ ನಡೆಸಲಾಗಿದೆ. ಆ.14ರಂದು ಪಟ್ಟಣದ ಸಾರ್ವಜನಿಕರಿಗೆ ಆಟೋಟ ಸ್ಪರ್ಧೆಗಳನ್ನು ನಡೆಸಲಾಗುವುದು. 15ರ ಬೆಳಗ್ಗೆ 8 ಗಂಟೆಗೆ ಪುರಸಭೆ ಆವರಣದಲ್ಲಿ ಧ್ವಜಾರೋಹಣ ನಡೆಸಲು ಅಗತ್ಯ ಸಿದ್ಧತೆಗಳನ್ನು ನಡೆಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net