ವರ್ಣ ಸಂಭ್ರಮ-ಚಿತ್ರಕಲಾ ಪ್ರದರ್ಶನ

Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:ಕುಂಚಬ್ರಹ್ಮ ಡಾ. ಎಂ.ವಿ.ಮಿಣಜಗಿ ಕಲಾ ಮಂದಿರ ಸಮಿತಿ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಾ. 8 ರಿಂದ ಮಾ.18 ರವರೆಗೆ ‘ವರ್ಣ ಸಂಭ್ರಮ’ ರಾಜ್ಯಮಟ್ಟದ ಮಹಿಳಾ ಸಮೂಹ ಚಿತ್ರಕಲಾ ಪ್ರದರ್ಶನವನ್ನು ವಿದ್ಯಾನಗರದ ಪಾಲಿಕೆ ವಲಯ ಕಚೇರಿ 5ರ ಮೊದಲ ಮಹಡಿಯ ಚಿಕ್ಕವೀರಯ್ಯ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಆರ್.ಬಿ.ಗರಗ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿತ್ಯ ಬೆ.11 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪ್ರದರ್ಶನ ವೀಕ್ಷಿಸಬಹುದು. 60 ಕಲಾವಿದೆಯರ ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿವೆ. ಕುಂಚಬ್ರಹ್ಮ ಡಾ. ಎಂ.ವಿ.ಮಿಣಜಗಿ ಕಲಾ ಮಂದಿರ ಸಮಿತಿಯ ಸರ್ವವರ್ಣಾತ್ಮಿಕೆ ಪ್ರಶಸ್ತಿಯನ್ನು ಹಿರಿಯ ಚಿತ್ರಕಲಾವಿದೆ ಮಂಜುಳಾ ಜಾನೆ ಇವರಿಗೆ ನೀಡಿ ಗೌರವಿಸಲಾಗುವುದು ಎಂದರು.

ಮಾ. 8ರಂದು ಬೆಳಗ್ಗೆ 11.30ಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸುವರು. ಪಾಲಿಕೆ ಉಪ ಮಹಾಪೌರ ದುರ್ಗಮ್ಮ ಬಿಜವಾಡ, ಪಾಲಿಕೆ ಸದಸ್ಯರಾದ ರೂಪಾ ಶೆಟ್ಟಿ, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ವಿಜೇತರಾದ ಬಸವರಾಜ್ ಮಾನೆ ಪಾಲ್ಗೊಳ್ಳುವರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಜಿ.ಆರ್.ಮಲ್ಲಾಪೂರ, ಸವಿತಾ ಬೆಣಗಿ, ಸುಮಂಗಲಾ ಭಟ್, ಮಂಜುಳಾ, ಸುಜಾತಾ ಪವಾರ, ಶಕುಂತಲಾ ವರ್ಣೆಕರ, ಕೆ.ವಿ.ಶಂಕರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net