ವರ್ಜಿನ್ ಅರಣ್ಯ ಸಂರಕ್ಷಣೆಗೆ ಕೇಂದ್ರ ಕ್ರಮ

Published on

ಬಳ್ಳಾರಿ : ಸಂಡೂರು ತಾಲೂಕಿನಲ್ಲಿರುವ ವರ್ಜಿನ್ ಅರಣ್ಯ (ಮೊದಲ ಅಥವಾ ಹಳೆಯ ಬೆಳವಣಿಗೆಯ ಕಾಡುಗಳು), ಅಲ್ಲಿಯ ವೈವಿಧ್ಯಮಯ ಜೀವರಾಶಿಗಳ ಸಂರಕ್ಷ ಕುರಿತಂತೆ ವಿಜಯನಗರ ಜಿಲ್ಲೆಯ ಕೊಟ್ಟೂರಿನ ಡಾ. ಸದಾನಂದ ಹೆಗ್ದಾಳಮಠ ಜು. 03 ರಂದು ರಾಷ್ಟ್ರಪತಿ ಅವರಿಗೆ ಬರೆದಿದ್ದ ಪತ್ರಕ್ಕೆ ರಾಷ್ಟ್ರಪತಿ ಕಾರ್ಯಾಲಯದಿಂದ ಸೂಕ್ತ ಸ್ಪಂದನೆ ದೊರೆತಿದೆ. ಈ ಪತ್ರದ ಆಧಾರದಲ್ಲಿ ಕೇಂದ್ರ ಅರಣ್ಯ ಸಂರಕ್ಷಣಾ ವಿಭಾಗದ ಸಹಾಯಕ ಕಮಿಷನರ್ ಆ. 6ರಂದು ರಾಜ್ಯ ಸರ್ಕಾರದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದು, ಡಾ. ಸದಾನಂದ ಹೆಗ್ದಾಳಮಠ ಪತ್ರದಲ್ಲಿ ಸೂಚಿಸಿದ ಅಂಶಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ವರದಿ ಕಳಿಸುವಂತೆ ಸೂಚಿಸಿದೆ.ಸಂಡೂರಿನ ವರ್ಜಿನ್ ಅರಣ್ಯಪ್ರದೇಶ, ಕಮ್ಮತ್ತೂರು, ಹದ್ದಿನಪಡೆ, ದೇವದಾರಿ ಅರಣ್ಯ ಪ್ರದೇಶದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿ. ಅಲ್ಲಿನ ಪರಿಸರ ಮತ್ತುವನ್ಯಜೀವಿಗಳ ಸಂರಕ್ಷಣೆ ಕುರಿತು ಮನವಿ ಮಾಡಿಕೊಂಡಿದ್ದಾರೆ. ಹೆಗ್ದಾಳಮಠ ಮನವಿಗೆ ಸ್ಪಂದಿಸಿದ ರಾಷ್ಟ್ರಪತಿ ಕಾರ್ಯಾಲಯ, ಈ ಕುರಿತು ಗಮನ ಹರಿಸುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವಾಲಯಕ್ಕೆ ಪತ್ರ ಕಳುಹಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net