ವರ್ಗಾವಣೆಯಾದ ವೈದ್ಯಾಧಿಕಾರಿಗೆ ಬೀಳ್ಕೊಡುಗೆ

Published on

ಹನೂರು: ತಾಲೂಕಿನ ಮಾರ್ಟಳ್ಳಿ (ಸುಳವಾಡಿ) ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸತತ 19 ವರ್ಷಗಳ ಕಾಲ ಸೇವೆ ಸಲ್ಲಿಸಿ ಹನೂರು ಆಸ್ಪತ್ರೆಗೆ ವರ್ಗಾವಣೆಯಾದ ವೈದ್ಯಾಧಿಕಾರಿ ಡಾ.ರಾಜೀವ್ ಅವರನ್ನು ಸೋಮವಾರ ಗ್ರಾಮಸ್ಥರು ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.

ಸುಳವಾಡಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫಾದರ್ ಕ್ರಿಸ್ಟೋಫರ್ ಮಾತನಾಡಿ, ಡಾ.ರಾಜೀವ್ ಅವರು 2006ರಿಂದಲೂ ಮಾರ್ಟಳ್ಳಿ ಆಸ್ಪತ್ರೆಯಲ್ಲಿ ಉತ್ತಮ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು, ಜನರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದರು. 2018ರಲ್ಲಿ ನಡೆದ ಸುಳವಾಡಿ ವಿಷ ಪ್ರಸಾದ ಸೇವನೆ ದುರಂತ ಪ್ರಕರಣದ ವೇಳೆ ಅಸ್ವಸ್ತಗೊಂಡವರಿಗೆ ಇನ್ನಿಲ್ಲದ ಕಾಳಜಿ ವಹಿಸಿ ಪ್ರಥಮ ಚಿಕಿತ್ಸೆ ನೀಡುವ ಮೂಲಕ ಹಲವು ಜೀವಗಳ ಉಳಿಸಿದ್ದಾರೆ. ಇದೀಗ ಹನೂರು ಸರ್ಕಾರಿ ಆಸ್ಪತ್ರೆಗೆ ವರ್ಗಾವಣೆಯಾಗಿದ್ದಾರೆ. ಹಾಗಾಗಿ ಅವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಸನ್ಮಾನಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಡಾ.ರಾಜೀವ್ ಮಾತನಾಡಿ, ಮಾರ್ಟಳ್ಳಿ ಭಾಗದ ಜನರ ವಿಶ್ವಾಸ ಹಾಗೂ ಸಹಕಾರದಿಂದ ಮಾರ್ಟಳ್ಳಿ ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗಿದ್ದು, ಸೇವೆ ತೃಪ್ತಿ ತಂದು ಕೊಟ್ಟಿದೆ. ನಿಮ್ಮ ಸಹಕಾರಕ್ಕೆ ಸದಾ ಋಣಿಯಾಗಿರುತ್ತೇನೆ ಎಂದರು. ಇದೇ ವೇಳೆ ನಿವೃತ್ತಿಯಾದ ನರ್ಸ್ ಮಾರಿಯಮ್ಮಾಳ್, ಫಿಲೋಮಿನಾ ಇವರನ್ನು ಸನ್ಮಾನಿಸಲಾಯಿತು. ಸಿಸ್ಟರ್ ಸಿಂಧೂ ಮೊನ್, ಗ್ರಾಪಂ ಸದಸ್ಯ ಸುರೇಶ್, ಮುಖಂಡರಾದ ಅಂತೋಣಿಸ್ವಾಮಿ, ಚಿನ್ನಪ್ಪಿಗೌಂಡರ್, ಮಣಿ, ವೆಂಕಟಾಚಲ, ಶಾಂತಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net