

ಹನೂರು: ಇಲ್ಲಿನ ಅಗ್ನಿಶಾಮಕ ಠಾಣೆಯ ಸಹಾಯಕ ಠಾಣಾಧಿಕಾರಿಯಾಗಿದ್ದ ಪ್ರಶಾಂತ್‌ನಾಯಕ್ ಅವರು ಮುಂಬಡ್ತಿ ಹೊಂದಿ ಶಿಕಾರಿಪುರ ಠಾಣಾಧಿಕಾರಿಯಾಗಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಬುಧವಾರ ಸಿಬ್ಬಂದಿ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.
ಪ್ರಶಾಂತ್‌ನಾಯಕ್ ಮಾತನಾಡಿ, ಠಾಣೆಯಲ್ಲಿ ಕಳೆದ 3 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿನ ಸಿಬ್ಬಂದಿ ವಿಶ್ವಾಸ ಹಾಗೂ ಸಹಕಾರದಿಂದ ತುರ್ತು ಸೇವೆಗಳ ಸಮಸ್ಯೆಗಳಿಗೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಯಿತು. ಹಾಗೆಯೇ ವರ್ಗಾವಣೆಗೊಂಡ ಠಾಣೆಯಲ್ಲೂ ಎಲ್ಲರ ಸಹಕಾರ ಪಡೆದು ಸೇವೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಅದೇ ರೀತಿ ಎಲ್ಲರೂ ದಕ್ಷತೆಯಿಂದ ಸೇವೆ ಸಲ್ಲಿಸಿ ಉನ್ನತ ಸ್ಥಾನ ಪಡೆಯಬೇಕು ಎಂದು ತಿಳಿಸಿದರು. ಸಿಬ್ಬಂದಿ ಮಹೇಶ್, ಪೆರಿಯನಾಯಗಂ, ರವಿ, ನಿಂಗೇಶ್, ಅಶ್ವತ್ಥ್, ನಾಗಪ್ಪ, ಬಸವರಾಜು, ಲೋಕೇಶ್, ಹರ್ಷ, ಮನೋಹರ್ ಹಾಗೂ ಚಂದ್ರೇಗೌಡ ಇದ್ದರು.